ಚಳ್ಳಕೆರೆ :
ಹಂಪಯ್ಯನ ಮಾಳಿಗೆಯಲ್ಲಿ ಮಳೆಗೆ ಜಲಾವೃತವಾದ
ಈರುಳ್ಳಿ ಬೆಳೆ
ಚಿತ್ರದುರ್ಗದ ಹಂಪಯ್ಯನಮಾಳಿಗೆ ಗ್ರಾಮದಲ್ಲಿ, ಸುರಿದ
ಬಾರಿ ಮಳೆಗೆ ಈರುಳ್ಳಿ ಬೆಳೆ ಜಲಾವೃತವಾಗಿದೆ.
ಧನಂಜಯ
ಎಂಬುವವರ ಒಂದು ಎಕರೆ ಪ್ರದೇಶದಲ್ಲಿ, ಬೆಳೆದ ಈರುಳ್ಳಿ ಬೆಳೆ
ಸಂಪೂರ್ಣ ಜಲಾವೃತವಾಗಿದ್ದು, ಈಗಾಗಲೇ ಉತ್ತಮ ಬೀಜ,
ಗೊಬ್ಬರ ಕೂಲಿ ಆಳು ಸೇರಿದಂತೆ ಸುಮಾರು ಒಂದೂವರೆ
ಲಕ್ಷದಷ್ಟು, ರೈತ ಧನಂಜಯ ಖರ್ಚು ಮಾಡಿದ್ದು, ಈರುಳ್ಳಿ ಕೊಳೆವ
ಶಂಕೆ ವ್ಯಕ್ತಪಡಿಸಿದ್ದಾರೆ.
ಸಾಲ ಮಾಡಿ, ಈರುಳ್ಳಿ ಬೆಳೆದ ರೈತ
ನಿರಂತರ ಮಳೆಯಿಂದಾಗಿ ಕಂಗಾಲಾಗಿದ್ದು, ಸರ್ಕಾರ ಪರಿಹಾರ
ಕೊಡಬೇಕೆಂದು ಆಗ್ರಹಿಸಿದ್ದಾರೆ.