ಚಳ್ಳಕೆರೆ : ದೇವರ ಮರುಕುಂಟೆ ಸರಕಾರಿ ಶಾಲಾ ಆವರಣದಲ್ಲಿ ಮಳೆಯ ನೀರು : ಶಾಲಾ ಮಕ್ಕಳಿಗೆ ಸಂಕಷ್ಟ..?
ಚಳ್ಳಕೆರೆ :
ಮಳೆ ಬಂದರೆ ರೈತನಿಗೆ ಖುಷಿಯಾದರೆ ಆದರೆ ಇನ್ನೊಂದು ಕಡೆ ತಗ್ಗು ಪ್ರದೇಶದ ವಾಸಿಗಳಿಗೆ ಶಾಲಾ ಮಕ್ಕಳಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ.
ಹೌದು ಚಳ್ಳಕೆರೆ ತಾಲೂಕಿನ ದೇವರ ಮರುಕುಂಟೆಯಲ್ಲಿ ಸರಕಾರಿ ಶಾಲಾ ಆವರಣದಲ್ಲಿ ಮಳೆಯ ನೀರು ನುಗ್ಗಿರುವ ಕಾರಣ ಶಾಲಾ ಮಕ್ಕಳಿಗೆ ಬಹಳ ತೊಂದರೆಯಾಗಿದೆ.
ಇನ್ನೂ ಶಾಲಾ ಕೊಠಡಿಗಳ ಕೆಲವು ಮೇಲ್ಚಾವಣಿಗಳು ಸೋರುತಿವೆಂದು ಅಲ್ಲಿನ ಗ್ರಾಮಸ್ಥರು ತಮ್ಮ ಮಕ್ಕಳ ಇತಾಸಕ್ತಿಗೆ ಅಳಲು ತೋಡಿಕೊಂಡಿದ್ದಾರೆ.
ಇನ್ನೂ ಸಂಬAಧಪಟ್ಟ ಅಧಿಕಾರಿಗಳು ಮಾತ್ರ ಸರಕಾರಕ್ಕೆ ವರದಿ ಮಾಡಿದ್ದೆವೆ ಅನುದಾನ ಬಂದ ಕೂಡಲೇ ಕೊಠಡಿಗಳ ದುರಸ್ತಿ ಕಾರ್ಯ ಮಾಡಲಾಗುತ್ತದೆ ಎಂಬುದು ಮಾತ್ರ ನಿರಂತರವಾಗಿದೆ ಆದರೆ ಮುಗ್ದ ಮಕ್ಕಳ ಜೊತೆಮಾತ್ರ ಸರಕಾರ ಚೆಲ್ಲಾಟ ಹಾಡುವುದು ಸತ್ಯವಾಗಿದೆ ಎಂದು ಪೋಷಕರು ಒತ್ತಾಯಿಸಿದ್ದಾರೆ.
ಗಡಿಭಾಗದಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನ ಈಗೇ ಚಳ್ಳಕೆರೆ ತಾಲೂಕಿನ ಸಮಸ್ಯೆಗಳು ಎಂಬ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಸುದ್ದಿಗಳು ಕೂಡ ಸದ್ದು ಮಾಡುತ್ತಿವೆ.
ಮುಗ್ದ ಮಕ್ಕಳ ಉಜ್ವಲ ಭವಿಷ್ಯಕ್ಕಾದರೂ ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳನ್ನು ಕೂಡಲೇ ಸರಿಪಡಿಸಬೇಕೆಂದು ಕನ್ನಡ ಶಾಲೆಗಳನ್ನು ಉಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.