ಮಡಿಲು ಸಂಸ್ಥೆ ವತಿಯಿಂದ ರೇಖಲಗೆರೆ ಗ್ರಾಮದಲ್ಲಿ ಡೆಂಗ್ಯೂ ರೋಗ ಕುರಿತು ಜಾಗೃತಿ ಜಾಥ

ಡೆಂಗ್ಯೂ ರೋಗವು ಸೊಳ್ಳೆಗಳ ಜೀವನ ಚಕ್ರದಿಂದ ಹರಡುತ್ತದೆ : ಆರೋಗ್ಯ ನಿರೀಕ್ಷಕ ಡಾ. ಅಶೋಕ್

ನಾಯಕನಹಟ್ಟಿ : ಇತ್ತೀಚಿನ ದಿನಗಳಲ್ಲಿ ಡೆಂಘೀ ರೋಗವು ಹೆಚ್ಚಿನದಾಗಿ ಹರಡುತ್ತಿದ್ದು ನಿಂತ ನೀರಿನ ಮೇಲೆ ಸೊಳ್ಳೆ ಕುಳಿತುಕೊಂಡು ಸೂಳ್ಳೆಗಳ ಸಂತತಿಯಿಂದ ಡೆಂಗ್ಯೂ ಜ್ವರಕ್ಕೆ ಕಾರಣವಾಗುತ್ತಿದೆ ಎಂದು ಆರೋಗ್ಯ ನಿರೀಕ್ಷಕ ಡಾ. ಅಶೋಕ್ ತಿಳಿಸಿದರು.

ತಾಲೂಕಿನ ನಾಯಕನಹಟ್ಟಿ ಸಮೀಪದ ರೇಖಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಡೆಂಗ್ಯೂ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ. ಆಶೋಕ ಅವರು ಸೊಳ್ಳೆಗಳು ನಿಂತ ನೀರಲ್ಲಿ ಕುಳಿತು ಸೊಳ್ಳೆ ಮೊಟ್ಟೆ ಇಟ್ಟರೆ 150 ರಿಂದ 200 ಮೊಟ್ಟೆ ಇಡುತ್ತವೆ ಇದರಿಂದ ಡೆಂಗ್ಯೂ ರೋಗವು ಸೊಳ್ಳೆಗಳ ಜೀವನ ಚಕ್ರದಿಂದ ಹರಡುತ್ತದೆ. ಹಾಗೂ ಮನೆಯ ಸುತ್ತಮುತ್ತ ಇರುವ ಚರಂಡಿಗಳು ಇರುವ ಕಸಕಡ್ಡಿ, ತೆಂಗಿನಗರಿಗಳು, ತೆಂಗಿನ ಚಿಪ್ಪುಗಳಲ್ಲಿ ನೀರು ಶೇಖರಣೆಯಾಗಿ ಅಂತ ಸ್ಥಳದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಇದರಿಂದ ಈಡೀಸ್ ಎಂಬ ಹೆಣ್ಣು ಸೊಳ್ಳೆಯಿಂದ ಡೆಂಗ್ಯೂ ,ಚಿಕನ್ ಗುನ್ಯಾ , ಮಲೇರಿಯಾ ರೋಗಳು ಹರಡುತ್ತದೆ ಎಂದರು.

ಡೆಂಗ್ಯೂ ರೋಗ ನಿಯಂತ್ರಣ ಮಾಡಲು ಜೂನ್ ಜುಲೈ ಆಗಸ್ಟ್ ಮೂರು ತಿಂಗಳ ಕಾಲ ನಾಲ್ಕೈದು ದಿನಗಳಿಗೊಮ್ಮೆ ನೀರಿನ ತೊಟ್ಟಿಗಳಲ್ಲಿ, ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಮಡಿಕೆಗಳಲ್ಲಿ ಸಂಗ್ರಹಿಸಿದ ನೀರು ಸ್ವಚ್ಛತೆಗೊಳಿಸಬೇಕು ಹಾಗೂ ಬೀಚಿಂಗ್ ಪೌಡರ್ ಅನ್ನು ಹಾಕಬೇಕು ಎಂದರು.

ಡೆಂಗ್ಯೂ ರೋಗವನ್ನು ನಿಯಂತ್ರಿಸಲು ಸರ್ಕಾರವು ಪ್ರತಿ ಶುಕ್ರವಾರ ಡ್ರೈ ಡೇ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಡಿಲು ಸಂಸ್ಥೆಯ ಗೌರವಾಧ್ಯಕ್ಷ ರಾಕೇಶ್ ಕುಮಾರ್ ಆರ್. ಎಚ್ ಮಾತನಾಡಿ ಡೆಂಗ್ಯೂ ರೋಗವು ಈಡೀಸ್ ಎಂಬ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ. ಈ ಸೊಳ್ಳೆಯು ಹಗಲತ್ತಿನಲ್ಲಿ ಕಚ್ಚುತ್ತದೆ ಇದರಿಂದ ಪ್ರತಿಯೊಬ್ಬರೂ ತಾವು ವಾಸಿಸುವ ಮನೆಯ ಅಕ್ಕ ಪಕ್ಕ ಸ್ವಚ್ಛತೆಯನ್ನು ಕಾಪಾಡಬೇಕು, ಮನೆಯ ಕಿಟಕಿಗಳಿಗೆ ಮೇಸ್ಸುಗಳನ್ನು ಹಾಕಬೇಕು. ಹಾಗೂ ಮಲಗುವ ಕೋಣೆಗಳಲ್ಲಿ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು ಇದರ ಜೊತೆಗೆ ಬೇವಿನ ಎಣ್ಣೆ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿ ಹಚ್ಚಿದರೆ ಡೆಂಗ್ಯೂ ರೋಗವನ್ನು ಓಡಿಸಬಹುದು, ಈಡೀಸ್ ಹೆಣ್ಣು ಸೊಳ್ಳೆ ಡೆಂಗಿ ರೋಗ ಇರುವವರಿಗೆ ಕಚ್ಚಿ ನಂತರ ಆರೋಗ್ಯವಂತ ವ್ಯಕ್ತಿಗೆ ಕಚ್ಚಿದರೆ ಅವರಿಗೂ ಸಹ ರೋಗ ಹರಡುತ್ತದೆ ಎಂದರು

ರೇಖಲಗೆರೆ ಗ್ರಾಮ ಪಂಚಾಯತಿ ಸದಸ್ಯ ವೀರೇಶ್ ಮಾತನಾಡಿ ನಮ್ಮ ಆರೋಗ್ಯ ಪೂರ್ಣವಾಗಿದ್ದರೆ ಜೀವನಪೂರ್ತಿ ನೆಮ್ಮದಿಯಾಗಿ ಇರಬಹುದು ಇದರಿಂದ ನಮ್ಮ ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆ ವಾಗಿ ಇಟ್ಟುಕೊಂಡರೆ ನಮಗೆ ಡೆಂಗಿ ರೋಗವು ಬರದ ರೀತಿ ಕಾಪಾಡಿಕೊಳ್ಳಬಹುದು. ಹಾಗೂ ಯಾವುದೇ ರೋಗ ಬಂದರು ಸಹ ಆದಷ್ಟು ಬೇಗ ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದರೆ ನಾವು ಆರೋಗ್ಯವಾಗಿರಲು ಸಾಧ್ಯ, ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಕುಡಿಯುವ ನೀರಿನ ಟ್ಯಾಂಕರಿನ ಸ್ವಚ್ಛತೆ ಹಾಗೂ ಊರಿನ ತುಂಬೆಲ್ಲ ಬೀಚಿಂಗ್ ಪೌಡರ್ ಹಾಕಿಸುತ್ತಿದ್ದೇವೆ ಇದರಿಂದ ಗ್ರಾಮದಲ್ಲಿ ಯಾವುದೇ ತರಹದ ಸಾಂಕ್ರಾಮಿಕ ರೋಗಗಳು ಹರಡದ ಹಾಗೆ ಕ್ರಮ ವಹಿಸುತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಡಿಲು ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ ಎಚ್, ನಿರ್ದೇಶಕ ದ್ಯಾಮಕುಮಾರ್ ಟಿ, ಶಾಲೆಯ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯ ವೀರೇಶ್, ಬಸಮ್ಮ, ಎಸ್ ಟಿ ಎಂ ಸಿ ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಆಶ ಕಾರ್ಯಕರ್ತೆ ಗೀತಾ, ಆಶಾ ಗ್ರಾಮಸ್ಥರು ಮುಖಂಡರುಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!