ಚಳ್ಳಕೆರೆ :
ಗ್ರಾಮೀಣ ಭಾಗದ ಆರಾಧ್ಯದೈವ ವಾಗಿರುವ ಶ್ರೀ ಗಲ್ಲೆಮಾರಮ್ಮ ದೇವಿ ಜಾತ್ರೆ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಹೌದು ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದಲೂ ಹಿರಿಯರು ಆಚರಿಸಿಕೊಂಡ ಸಂಪ್ರದಾಯ ಪದ್ದತಿಗಳು, ಇಂದಿಗೂ ಜೀವಂತವಾಗಿವೆ ಆದರಿಂದ ನಮ್ಮ ಆರಾಧ್ಯದೈವ ವಾಗಿರುವ ನಮ್ಮ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಧಿ ವಿಧಾನಗಳ ಮೂಲಕ ಅದ್ದೂರಿಯಾಗಿ ಬಹಳಸಂಭ್ರಮ ಸಡಗರಿಂದ ಈ ದೇವಿ ಜಾತ್ರೆಯನ್ನು ಆಚರಿಸಿದ್ದೆವೆ ಎನ್ನುತ್ತಾರೆ ಗ್ರಾಮದ ಹಿರಿಯರು.
ಇನ್ನೂ ಹದಿ ಹರೆಯದ ಯುವತಿಯರು, ಹಾಗೂ ಮಹಿಳೆಯರು ಗ್ರಾಮದಲ್ಲಿ ಶ್ರೀ ದೇವಿಯ ಕುಂಬ ಹೊತ್ತು ಮೆರವಣಿಗೆ ಹೊರಟ ದೃಶ್ಯ ಬೆರಗು ತರುವಂತಿತ್ತು.
ಒಟ್ಟಾರೆ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಶ್ರೀ ಗಲ್ಲೆ ಮಾರಮ್ಮ ದೇವಿ ಉತ್ಸವ ಜರುಗಿತು.