ಚಳ್ಳಕೆರೆ : ಅಕ್ಷರ ದಾಸೋಹ
ಸಹಾಯಕ ನಿರ್ದೇಶಕರಾಗಿ ಜಿ.ಟಿ.ಮಂಜುನಾಥಸ್ವಾಮಿ ಅಧಿಕಾರ ಸ್ವೀಕಾರ
ಚಳ್ಳಕೆರೆ ತಾಲೂಕಿನ ಅಕ್ಷರ ದಾಸೋಹ ಅಧಿಕಾರಿಯಾಗಿ
ಕರ್ತವ್ಯ ನಿರ್ವಹಿಸುತ್ತಿದ್ದ ತಿಪ್ಪೇಸ್ವಾಮಿ
ಶಿರ ತಾಲೂಕಿನ
ತಾವರಕೆರೆಯ ಸರಕಾರಿ ಪ್ರೌಢಶಾಲೆಯ
ಮುಖ್ಯ ಶಿಕ್ಷಕರಾಗಿ ವರ್ಗವಣೆಗೊಂಡಿದ್ದು,
ತೆರವಾದ ಸ್ಥಾನಕ್ಕೆ ಮಧುಗಿರಿ
ತಾಲೂಕಿನ ಕೊಟ್ಟಿಹಾರನಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆ ಮುಖ್ಯ
ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿ.ಟಿ.ಮಂಜುನಾಥಸ್ವಾಮಿ ಚಳ್ಳಕೆರೆ
ತಾಲೂಕಿನ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾಗಿ ಕಚೇರಿಯಲ್ಲಿ
ಅಧಿಕಾರಿ ಸ್ವೀಕರಿಸಿದರು.
ಇನ್ನೂ ತಾಪಂ ಇಒ ಶಶಿಧರ್, ಬಿಇಒ ಕೆ,ಎಸ್.ಸುರೇಶ್, ವಿಶ್ವಭಾರತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿಟಿ.ವೀರಭದ್ರಪ್ಪ
ಸೇರಿದಂತೆ
ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷರು, ರಾಜ್ಯ ಉಪಾಧ್ಯಕ್ಷರು,
ಸರಿದಂತೆ ವಿವಿಧ ಶಾಲೆಯ ಶಿಕ್ಷಕರು ತಿಪ್ಪೇಸ್ವಾಮಿಗೆ ಬೀಳ್ಕೊಟ್ಟರು, ನಂತರ
ನೂತನಾಗಿ ಅಧಿಕಾರಿ ಸ್ವೀಕರಿಸಿದ ಮಂಜುನಾಥಸ್ವಾಮಿಗೆ
ಸ್ವಾಗತಿಸಿದರು.
ನೂತನವಾಗಿ ಅಧಿಕಾರ ವಹಿಸಿಕೊಂಡ
ಜಿ.ಟಿ.ಮಂಜುನಾಥಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ ಬಡ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಜಾರಿಗೆ ತಂದ ಅಕ್ಷರ ದಾಸೋಹ ಕಾರ್ಯಕ್ರಮ ರಾಜ್ಯದಲ್ಲಿ ಉತ್ತಮವಾಗಿ ನಡೆಯುತ್ತಿದೆ, ಗುಣಮಟ್ಟದ ಶಿಕ್ಷಣಕ್ಕೆ ಹಾಗೂ ಹಾಜರಾತಿಗೂ ಸಹಕಾರಿಯಾಗಿದೆ, ಮುಂದಿನ ದಿನಗಳಲ್ಲಿ ಎಲ್ಲಾರ ಸಹಕಾರ ಹಾಗೂ ತಮ್ಮ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಜಾರಿ ಮಾಡುವೆ ಎಂದರು.