ಚಳ್ಳಕೆರೆ :
ಅಕ್ರಮ ಮಧ್ಯ ವಶಪಡಿಸಿಕೊಂಡ ಚಳ್ಳಕೆರೆ ಅಬಕಾರಿ ಪೋಲೀಸ್ ರು
ಹೌದು ತಾಲ್ಲೂಕಿನಲ್ಲಿ ಅಕ್ರಮ ಮಧ್ಯ ಸಾಗಟಕ್ಕೆ ಬ್ರೇಕ್ ಹಾಕುವ ಮೂಲಕ ಅಕ್ರಮ ಸಾಗಟಗಾರರಿಗೆ ಸಿಂಹ ಸ್ವಪ್ನವಾಗಿದ್ದಾರೆ
ಚಳ್ಳಕೆರೆ ನಗರದಿಂದ ದೊಡ್ಡ ಉಳ್ಳಾರ್ತಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗಸ್ತು ನಿರ್ವಹಿಸುತ್ತಿದ್ದಾಗ ದೊರೆತ ಮಾಹಿತಿ ಮೇರೆಗೆ ಚಳ್ಳಕೆರೆ ನಗರದಿಂದ ದೊಡ್ಡ ಉಳ್ಳಾರ್ತಿ ಗ್ರಾಮಕ್ಕೆ ಹೋಗುವ ರಸ್ತೆಯ ಎಡಬಾಗದ ರಸ್ತೆಯ ಪಂಪ್ ಹೌಸ್ ಹತ್ತಿರ ವಾಹನಗಳನ್ನು ಪರಿಶೀಲಿಸುತ್ತಿದ್ದಾಗ ಸುಮಾರು ಸಂಜೆ-6.55 ಗಂಟೆ ಸಮಯದಲ್ಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ 90, ಮಿಲಿಯ 37 ಟೆಟ್ರಾ ಪ್ಯಾಕ್ ಗಳು, ಓಲ್ಡ್ ಟಾವರಿನ್ ವಿಸ್ಕಿ 180 ಮಿಲಿಯ 8 ಟೆಟ್ರಾ ಪ್ಯಾಕ್ ಗಳು ಇದ್ದು ಒಟ್ಟು-4.770 ಲೀಟರ್ ಮದ್ಯ ವನ್ನು ವಶಪಡಿಸಿಕೊಂಡಿದ್ದಾರೆ.
ಜೊತೆಗೆ ಹೀರೋ ಸ್ಪ್ಲಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಪರವಾನಗಿ ಇಲ್ಲದೇ ಸಂಗ್ರಹಣೆ ಮಾಡಿ ಸಾಗಾಣಿಕೆ ಮಾಡುತ್ತಿದ್ದುದು ಪತ್ತೆಯಾಗಿದ್ದು,
ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ-10,11,14,32,34,38(ಎ) ರನ್ವಯ ಶಿಕ್ಷಾರ್ಹ ಅಪರಾಧವಾಗಿದ್ದು ನಿಯಮಾನುಸಾರ ಮದ್ಯವನ್ನು ಹಾಗೂ ದ್ವಿಚಕ್ರ ವಾಹನವನ್ನು ಇಲಾಖಾ ವಶಕ್ಕೆ ಪಡೆದುಕೊಂಡು ಸ್ಥಳ ಮಹಜರ್ ಕ್ರಮ ಜರುಗಿಸಿ ಘೋರ ಮೊಕದ್ದಮೆಯನ್ನು ದಾಖಲಿಸಿದೆ.
ಇನ್ನೂ ಆರೋಪಿಯು ಪರಾರಿಯಾಗಿದ್ದು ತನಿಖಾ ಸಮಯದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ.
ಪ್ರಕರಣದಲ್ಲಿ ವಶಪಡಿಸಿಕೊಂಡ ಮಧ್ಯ ಮತ್ತು ವಾಹನದ ಮೌಲ್ಯ ಸುಮಾರು 53000.00 ರೂಪಾಯಿಗಳು ಆಗಿರುತ್ತದೆ.
ಸದರಿ ಕಾರ್ಯಚರಣೆಯಲ್ಲಿ ಸಿ ನಾಗರಾಜು ಅಬಕಾರಿ ನಿರೀಕ್ಷಕರು, ಟಿ ರಂಗಸ್ವಾಮಿ ಅಬಕಾರಿ ಉಪ ನಿರೀಕ್ಷಕರು-1, ಡಿಟಿ ತಿಪ್ಪಯ್ಯ ಅಬಕಾರಿ ಉಪ ನಿರೀಕ್ಷಕರು -2, ಮುಖ್ಯಪೇದೆಗಳಾದ ಎನ್. ನಾಗರಾಜ, ಬಿ.ಮಂಜುಳಮ್ಮ, ಟಿ.ಸೋಮಶೇಖರ ಇವರು ಪಾಲ್ಗೊಂಡಿದ್ದರು.