ಸರ್ಕಾರಿ ಶಾಲೆಗಳಿಗೆ ವಿಜ್ಞಾನ ಕಿಟ್ ವಿತರಣೆ
ಚಳ್ಳಕೆರೆ
ಕನ್ನಡ ಶಾಲೆ ಉಳುವಿಗೆ ಕುವೈತ್ ಕನ್ನಡ ಕೂಟದ ಕ್ಷೇಮಾಭ್ಯೊದಯ ಸಂಘದ ವತಿಯಿಂದ ಗಡಿ ಗ್ರಾಮ ಹಾಗೂ ಹೆಚ್ಚು ವಿದ್ಯಾರ್ಥಿ ನಿಯರು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಪರಿಕರಗಳು ಹಾಗೂ ವಿಜ್ಞಾನ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಕುವೈತ್ ಕನ್ನಡ ಕೂಟ ಕ್ಷೇಮಾಭ್ಯೂದಯ ಸಂಘದ ಅಧ್ಯಕ್ಷರಾದ ವಾಸಕಿ ನುಗ್ಗೇನಹಳ್ಳಿ ಹೇಳಿದರು.
ನಗರದ ಹೆಗ್ಗೆರೆ ತಾಯಮ್ಮ ಬಾಲಕಿರ ಪ್ರೌಢಶಾಲೆಯಲ್ಲಿ ಇಂದು ನಡೆದ ಶಾಲಾ ಶಿಕ್ಷಣಾ ಇಲಾಖೆ ಕುವೈತ್ ಕೂಟ ಕ್ಷೇಮಾಭ್ಯೂದಯ ಸಂಘ ಬೆಂಗಳೂರು ಇವರ ಸಹಯೋಗದೊಂದಿಗೆ ಶಾಲಾ ದತ್ತು ಯೋಜನಡಿ ವಿಜ್ಞಾನ ಕಿಟ್ ವಿತರಣೆ ಹಾಗೂ ಕಾರ್ಯಗಾರ ವನ್ನು ಉದ್ಘಾಟಿಸಿ ಮಾತನಾಡಿ. ನಾವು ಮಿತ್ರರೆಲ್ಲರೂ ಸೇರಿ ಸಂಘವನ್ನ ನಿರ್ಮಾಣ ಮಾಡಿಕೊಂಡಿದ್ದು ನಮ್ಮ ಕುವೈತ್ ಕನ್ನಡ ಕೂಟ ಕ್ಷೇಮಭೂದಯ ಕನ್ನಡ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಪರಿಕರಗಳು, ಕಂಪ್ಯೂಟರ್ಗಳು, ನಲಿ ಕಲಿ ಗೆ ಸಂಬಂಧಪಟ್ಟಂತಹ ಪರಿಕರಗಳು, ಹೈಟೆಕ್ ಶೌಚಾಲಯ ಕುಡಿಯುವ ಶುದ್ಧ ನೀರಿನ ಘಟಕ ಹಾಗೂ ವಿಜ್ಞಾನ ಕಿಟ್ ಗಳನ್ನ ವಿತರಣೆ ಮಾಡಲಾಗುತ್ತಿದ್ದು ಇದರಿಂದ ಕನ್ನಡ ಶಾಲೆಗಳು ಉಳಿಯಲು ಮಕ್ಕಳಿಗೆ ಕಲಿಯಲು ಸಾಕಷ್ಟು ಅನುಕೂಲವಾಗುತ್ತದೆ. ನಮ್ಮ ಸಂಸ್ಥೆ ನಿರಂತರವಾಗಿ ಶಿಕ್ಷಣಕ್ಕೆ ಮಹತ್ವ ನೀಡುತ್ತಿದೆ ಎಂದರು.
ಸಂಸ್ಥೆಯ ಖಾಜಾಂಚಿ ಪ್ರಭಾಕರ್ ಮಾತನಾಡಿ, ನಾಲ್ಕು ಜನ ಸ್ನೇಹಿತರಿಂದ ನಿರ್ಮಾಣವಾದ ನಮ್ಮ ಕುವೈತ್ ಕನ್ನಡ ಕ್ಷೇಮಾಭ್ಯೂದಯ ದೊಡ್ಡಮಟ್ಟದಲ್ಲಿ ಬೆಳೆದಿದ್ದು ಕನ್ನಡ ಶಾಲೆಗಳ ಉಳಿವಿಗೆ ನಮ್ಮ ಸಂಸ್ಥೆ ದುಡಿಯುತ್ತಿದೆ. ಶಾಲೆಗಳಲ್ಲಿ ಸರ್ಕಾರ ನೀಡುವ ಹಲವು ಸೌಲತ್ತುಗಳ ಜೊತೆಗೆ ನಮ್ಮ ಸಂಸ್ಥೆ ನೀಡುವಂತಹ ಶಿಕ್ಷಣಕ್ಕೆ ಅನುಕೂಲವಾಗುವಂತಹ ಅನೇಕ ಅನುಕೂಲಗಳನ್ನು ಪಡೆದುಕೊಂಡು ಉತ್ತಮ ಶಿಕ್ಷಣವಂತರಾಗಬಹುದು ಎಂದರು.
ಹೆಗ್ಗೆರೆ ತಾಯಮ್ಮ ಬಾಲಕಿರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎ. ವೀರಣ್ಣ ಮಾತನಾಡಿ, ಕುವೈತ್ ಕನ್ನಡ ಕ್ಷೇಮಾಭ್ಯೂದಯ ಸಂಸ್ಥೆ ನಿಜವಾಗಲೂ ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡುತ್ತಿದೆ. ಈ ಸಂಸ್ಥೆ ಬಗ್ಗೆ ಕೇಳಿದ್ದೆ ಆದರೆ ಇಂದು ಇದೇ ಸಂಸ್ಥೆ ನಮ್ಮ ಶಾಲೆಗೆ ವಿಜ್ಞಾನ ಕಿಟ್ ನೀಡಿದ್ದು ಮುಂದಿನ ದಿನಗಳಲ್ಲಿ ಮಕ್ಕಳ ಕುಳಿತುಕೊಳ್ಳಲು ಬೆಂಚ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಯನ್ನು ಹೊಂದಿರುವಂತಹ ಪ್ರೌಢಶಾಲೆ ಇದು ಇಲ್ಲಿ ಇನ್ನೂ ಸಾಕಷ್ಟು ಸವಲತ್ತುಗಳ ಅವಶ್ಯಕತೆ ಇದೆ. ಶಾಸಕರು ಸಹ ನಮ್ಮ ಶಾಲೆಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಡುತ್ತಿದ್ದಾರೆ
ಇದರ ಜೊತೆಗೆ ವಿಜ್ಞಾನಕ್ಕೆ ಸಂಬಂಧಪಟ್ಟಂತಹ ಕಿಟ್ ಗಳನ್ನ ಇಂದು ಸಂಸ್ಥೆ ನೀಡಿರುವುದು ನಮಗೆ ಸಂತಸದ ವಿಚಾರ ಎಂದರು.
ಈ ಸಂದರ್ಭದಲ್ಲಿ ಕುವೈತ್ ಕನ್ನಡ ಕೂಟ ಕ್ಷೇಮದ್ಯೋದಯ ಸಂಸ್ಥೆಯ ಕಾರ್ಯದರ್ಶಿ ಸುಧೀರ್ ಶಣ್ಯ್ ,ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಆರ್ ಮಾರುತೇಶ್ ಕಾರ್ಯದರ್ಶಿ ತಿಪ್ಪೇಸ್ವಾಮಿ, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ. ರಾಜಕುಮಾರ, ಸಂಸ್ಥೆಯ ನಿರ್ವಾಹಕ ಚಿತ್ರಯ್ಯನ ಹಟ್ಟಿ ರಾಜೇಶ್, ಶ್ರೀಕಾಂತ್ ಶಿಕ್ಷಕರಾದ ರಾಜಣ್ಣ ,ರಾಧಾ, ಪ್ರದೀಪ್, ಪ್ರಾಣೇಶ್. ನಾಗರಾಜು ಶಾಲೆ ಶಿಕ್ಷಕರು ಇದ್ದರು.