ಚಳ್ಳಕೆರೆ :
ಕೇಂದ್ರ ಹಣಕಾಸು ಸಚಿವರ ಭೇಟಿ ಮಾಡಲಿರುವ ಸಿಎಂ
ಡಿಸಿಎಂ
ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು
ಜುಲೈ 31 ರಂದು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ
ಮಾಡಲಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ
ಮಂಜೂರು ಮಾಡುವಂತೆ, ಕೋರಿಕೆ ಸಲ್ಲಿಸಲಿದ್ದಾರೆಂದು
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.
ಭದ್ರಾ ಮೇಲ್ದಂಡೆಯ ರೂ. 5300 ಕೋಟಿ ಅನುದಾನದ ಬಗ್ಗೆ
ಪ್ರಸ್ತಾಪಿಸಲಿದ್ದಾರೆಂದರು.