ಶಿಕ್ಷಕ ವೃತ್ತಿ ಎಂಬುವುದು ದೇಶ ಕಟ್ಟುವ ಕೆಲಸ. ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕ ಅಧ್ಯಕ್ಷ ಜಾಗನೂರಹಟ್ಟಿ ಬಿ. ಟಿ. ಪ್ರಕಾಶ್
ನಾಯಕನಹಟ್ಟಿ:: ಜುಲೈ 31.
ಒಂದು ಸುಸಂಸ್ಕೃತಿ ದೇಶ ಕಟ್ಟಲು ಅಲ್ಲಿನ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕ ಅಧ್ಯಕ್ಷ ಬಿ.ಟಿ. ಪ್ರಕಾಶ್ ಹೇಳಿದ್ದಾರೆ
ಬುಧವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾಗನೂರಹಟ್ಟಿ ಗ್ರಾಮಸ್ಥರು ಹಾಗೂ ಎಸ್ ಡಿ ಎಂ ಸಿ ವತಿಯಿಂದ ಶಿಕ್ಷಕ ಕೆ. ಟಿ. ರಾಮಚಂದ್ರಪ್ಪ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು. ಅನ್ನ ಕೊಡುವ ರೈತ ದೇಶ ಕಾಯುವ ಸೈನಿಕ ಅಕ್ಷರ ಕಲಿಸಿದ ಗುರು ಇವರ ಸೇವೆ ಶ್ಲಾಘನೀಯ . ಎಲ್ಲಾ ಕ್ಷೇತ್ರಗಳನ್ನು ಬೆಳೆಸುವಂತಹ ಗಾಡಿಗರು.
ಶಿಕ್ಷಕ ವೃತ್ತಿ ಸಮಾಜದಲ್ಲಿ ಸಾಮಾಜಿಕ ಬದಲಾವಣೆ ತರುವಂತಹ ಹುದ್ದೆಯಾಗಿದೆ ಈ ಸೇವೆ ಸಿಗುವುದು ತುಂಬಾ ಅದೃಷ್ಟವಂತರಿಗೆ ಶಿಕ್ಷಕ ಕೆ ಟಿ ರಾಮಚಂದ್ರಪ್ಪ ನಮ್ಮ ಗ್ರಾಮದಲ್ಲಿ ಸುಮಾರು 17 ರಿಂದ 18 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.
ಇನ್ನೂ ಎನ್‌ಜಿಒ ಎನ್.
ಪಾಲಯ್ಯ ಮಾತನಾಡಿ ಶಿಕ್ಷಕ ಕೆ ಟಿ ರಾಮಚಂದ್ರಪ್ಪ ಉತ್ತಮ ಶಿಕ್ಷಕರಾಗಿ ನಮ್ಮ ಗ್ರಾಮದಲ್ಲಿ ಸೇವೆ ಸಲ್ಲಿಸಿದ್ದಾರೆ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಇನ್ನೂ ನಿವೃತ್ತಿ ಹೊಂದಿದ ಶಿಕ್ಷಕ ಕೆ ಟಿ ರಾಮಚಂದ್ರಪ್ಪ ಮಾತನಾಡಿದರು ಸುಮಾರು ವರ್ಷಗಳ ಮಕ್ಕಳಿಗೆ ಪಾಠ ಹೇಳಿಕೊಡುವ ಕೈಗಳು ಇಂದು ನಿವೃತ್ತಿ ಬಯಸುತ್ತಿವೆ ಆದರೆ ಸರ್ಕಾರಿ ಸೇವೆಯಲ್ಲಿ ಇದ್ದಷ್ಟು ದಿನಗಳ ಕಾಲ ಉತ್ತಮ ಸೇವೆ ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಜಾಗನೂರಹಟ್ಟಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದರು.
ಇದೆ ವೇಳೆ ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರಪ್ಪ ಮರಕ್ಕನವರ ಮಾತನಾಡಿದರು ಶಿಕ್ಷಕ ಕೆ.ಟಿ. ರಾಮಚಂದ್ರಪ್ಪ ಅಪಾರ ವಿದ್ಯಾರ್ಥಿಗಳ ಬಳಗವನ್ನ ಹೊಂದಿದಂತವರು ಉತ್ತಮ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ನಮ್ಮ ಶಾಲೆಗೆ ಗ್ರಾಮಸ್ಥರ ಸಹಕಾರ ಹೀಗೆ ಇರಲಿ ಎಂದು ಗ್ರಾಮಸ್ಥರಿಗೆ ಅಭಿನಂದನೆಯನ್ನು ತಿಳಿಸಿದರು.
ಇನ್ನೂ ಜಾಗನೂರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾಮಯ್ಯ ಮೇಷ್ಟ್ರು ಕೆ.ಟಿ. ರಾಮಚಂದ್ರಪ್ಪ ನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಬಾವುಕರಾದ ಗ್ರಾಮಸ್ಥರು ಹಾಗೂ ಶಿಕ್ಷಕರು
ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯ ಎಸ್.ಓಬಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಕೆ. ಪಿ. ತಿಪ್ಪೇಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕ ಅಧ್ಯಕ್ಷ ಪಿ. ಮುತ್ತಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷೆ ಜಯಮ್ಮ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಗೊಂಚಿಕಾರ್ ಪಾಲಯ್ಯ, ಕುಮಾರ್ ,ಕೆ.ಪಿ .ನಾಗರಾಜ್, ಶಿಕ್ಷಕರಾದ ತಿಪ್ಪೇಸ್ವಾಮಿ, ಪ್ರೇಮಕ್ಕ, ಕುಬೇರಪ್ಪ, ಸುಬ್ಬಲಕ್ಷ್ಮಿ, ಸೇರಿದಂತೆ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಜಾಗನೂರಹಟ್ಟಿ ಸಮಸ್ತ ಗ್ರಾಮಸ್ಥರು ಇದ್ದರು