ಅಪರಾಧವನ್ನು ತಡೆಯಲು ಹೆಣ್ಣು ಮಕ್ಕಳ ಪೋಷಕರ ಜವಾಬ್ದಾರಿ ದೊಡ್ಡದು: ಸಿವಿಲ್ ನ್ಯಾಯಾಧೀಶರಾದ ಎಚ್ ಆರ್ ಹೇಮಾ
ಚಳ್ಳಕೆರೆ
ಕೆಲವು ಗ್ರಾಮಾಂತರ ಪ್ರದೇಶದಲ್ಲಿ ಬಾಲ್ಯ ವಿವಾಹ ಚಿಕ್ಕ ಮಕ್ಕಳ ಮಾರಾಟ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಇಂತಹ ಚಟುವಟಿಕೆಗಳು ಕಾನೂನು ಪ್ರಕಾರ ಅಪರಾಧವಾಗಿರುತ್ತದೆ ಎಂದು ಆಫರ್ ಸಿವಿಲ್ ನ್ಯಾಯಾಧೀಶರಾದ ಎಚ್ಆರ್ ಹೇಮಾ ಮಕ್ಕಳಿಗೆ ಕಿವಿ ಮಾತು ಹೇಳಿದರು ,
ಇವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿರುವ ಮಾನವ ಕಳ್ಳ ಸಾಗಾಣಿಕೆ ಮಾಸಾಚರಣೆ ಹಾಗೂ ರಾಷ್ಟ್ರೀಯ ಸೇವಾ ಸಂಘ ಮತ್ತು ವಕೀಲರ ಸಂಘದ ಸಹಯೋಗದೊಂದಿಗೆ ಶಶಿಗೆ ನೀರು ಹಾಕುವ ಮೂಲಕ ಮಾತನಾಡಿದ ಇವರು
ಇತ್ತೀಚಿನ ದಿನಮಾನಗಳಲ್ಲಿ ಬಡ ಕುಟುಂಬದ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗಿದ್ದಾರೆ, ಚಿಕ್ಕ ಮಕ್ಕಳ ಮಾರಾಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಪೋಷಕರ ಅ ಜವಾಬ್ದಾರಿತನವೇ ಕಾರಣ,
ಇಂದಿನ ಯುವ ಪೀಳಿಗೆಯ ಯುವಕರು ಕಾನೂನಿನ ಅರಿವು ಗೊತ್ತಿದ್ದರೂ ಕೂಡ ಚಿಕ್ಕ ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ಗಳು ನಡೆಯುತ್ತಿದೆ, ಕಾನೂನು ಎಷ್ಟೇ ಬಲಿಷ್ಠವಾದರೂ ಕೂಡ ಅದನ್ನು ಅರಿಯದೆ ಯುವ ಜನಾಂಗ ತಪ್ಪು ದಾರಿ ತುಳಿಯುತ್ತಿದ್ದಾರೆ,
ಈ ಹಿನ್ನೆಲೆಯಲ್ಲಿ ಯುವಕರೂ ಕೂಡ ಗಾಂಜಾ ಅಪಿಮ ದಂತಹ ದುಶ್ಚಟಕ್ಕೆ ಬಿದ್ದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಅಲ್ಲದೆ ಈ ವಿಷಯದಲ್ಲಿ ಪೋಷಕರ ಪಾತ್ರ ಬಹುಮುಖ್ಯವಾಗಿದ್ದು,
ಪೋಷಕರು ಮಕ್ಕಳ ಕಡೆ ದಿನನಿತ್ಯ ಗಮನಹರಿಸುವ ಕೆಲಸ ಮಾಡಬೇಕಾಗಿದೆ ಈ ಒಂದು ನಿಟ್ಟಿನಲ್ಲಿ ನಮ್ಮ ಒಂದು ಯುವ ಪೀಳಿಗೆಗಳು ದುಶ್ಚಟಕ್ಕೆ ಬಲಿಯಾಗದೆ ಶಾಲಾ ಕಾಲೇಜಿಗೆ ಹೋಗಿ ಉತ್ತಮ ಶಿಕ್ಷಣ ಪಡೆದು ತಮ್ಮ ಜೀವನದ ಗುರಿಯನ್ನು ತಲುಪಬೇಕಾಗಿದೆ ಎಂದು ತಿಳಿಸಿದರು ,
ಇನ್ನು ಈ ವೇಳೆ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ ,ಪೋಷಕರು ಮಕ್ಕಳನ್ನು ಸಣ್ಣ ಗಿಡವಿದ್ದಾಗ ಬಗ್ಗಿಸಬೇಕು ಮರವಾದಾಗ ಅಲ್ಲ ,ಈ ಕಾರಣದಿಂದಾಗಿ ಪೋಷಕರ ನಿರ್ಲಕ್ಷತನ ದಿಂದಾಗಿ ಇಂದಿನ ಯುವ ಪೀಳಿಗೆ ಹಾಳಾಗುತ್ತಿರುವುದು ಖಂಡನೀಯ, ಇದು ಅಲ್ಲದೆ ಇತ್ತೀಚಿನ ದಿನಮಾನಗಳಲ್ಲಿ ಕಾಲೇಜಿನ ಯುವಕ ಯುವತಿಯರು ಪುಸ್ತಕ ಮರೆತು ಕೇವಲ ಮೊಬೈಲ್ ಮೂಲಕ ನೋಡಿ ಕುಳಿತುಕೊಳ್ಳುವುದು ಇವರ ದಿನನಿತ್ಯದ ಕರ್ತವ್ಯವಾಗಿದೆ,
ಇದರಿಂದಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು ,
ಇನ್ನು ಈ ಸಂದರ್ಭದಲ್ಲಿ ಪ್ರಾನ್ಸಿಪಾಲ್ ಎಂ ರವೀಶ್ ವಕೀಲರಾದ ಬಿಪಾಲಯ್ಯ ಎಂ ಸಿದ್ದರಾಜು ರುದ್ರಯ್ಯ ನಾಗರಾಜ್ ಟಿ ಶ್ರೀನಿವಾಸ್ ಶಾಂತಮ್ಮ ಮದುವತಿ ಶಿಲ್ಪ ಸೇರಿದಂತೆ ಅನೇಕ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪನ್ಯಾಸಕರು ಹಾಜರಿದ್ದರು ,