ಚಳ್ಳಕೆರೆ : .

ಸರ್ಕಾರಿ ಕಲಾ ಕಾಲೇಜಿನ ವಾಣಿಜ್ಯ ವಿಭಾಗದ 1989ನೇ ಸಾಲಿನ ಬಿ.ಕಾಂ
ವಿದ್ಯಾರ್ಥಿಗಳು ಏರ್ಪಡಿಸಿದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು.

ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಹಳೆಯ ಖಾದಿ ಭಂಡಾರ ಮಳಿಗೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ

ವ್ಯಾಸಂಗ ದಿನಗಳಲ್ಲಿ ಗುರುಗಳಾದ
ಅರ್ಥಶಾಸ್ತ್ರ ಉಪನ್ಯಾಸಕ ಎಸ್.ಲಕ್ಷ್ಮಣ ರವರನ್ನು ಸನ್ಮಾನಿಸಲಾಯಿತು.

ಇನ್ನೂ
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಗುರು ಶಿಷ್ಯರ ಬಾಂಧವ್ಯ ಕ್ಷಣಿಸುತ್ತಿದೆ ಎಂಬುದು ಒಂದು
ದೊಡ್ಡ ವಿಪರ್ಯಾಸ ಸಂಗತಿ. ಅದಕ್ಕೆ ಕಾರಣ ಮೊಬೈಲ್ ಹಾವಳಿ ಆದರೆ ಹಿಂದಿನ ಕಾಲದಲ್ಲಿ ಗುರು ಶಿಷ್ಯರ
ಬಾಂಧವ್ಯ ಹೆಚ್ಚು ಇತ್ತು ಎಂಬುದಕ್ಕೆ 36 ವರ್ಷಗಳ ನಂತರ ನನ್ನ ಶಿಷ್ಯರು ಏರ್ಪಡಿಸಿರುವ
ಕಾರ್ಯಕ್ರಮವೇ ಸಾಕ್ಷಿ ಎಂದರು.

ನಾನು ಉಪನ್ಯಾಸಕ ವೃತ್ತಿ ಆರಂಭಿಸಿದಾಗ ದೊರೆತ ಮೊದಲ ಈ
ವಿದ್ಯಾರ್ಥಿಗಳ ತಂಡ ನಿಮಗೆ ಚೆನ್ನಾಗಿ ಪಾಠ ಮಾಡಬೇಕು ಎನ್ನುವ ಸಲುವಾಗಿ ನಾನು ಒಬ್ಬ ವಿದ್ಯಾರ್ಥಿಯಂತೆ
ಎಚ್ಚೆಚ್ಚು ವ್ಯಾಸಂಗ ಮಾಡಿ ತಯಾರಿ ಮಾಡಿಕೊಂಡು ತರಗತಿಗೆ ಬಂದು ಪ್ರವಚನ ಮಾಡುತ್ತಿದ್ದೆ. ಈ
ಪ್ರಯತ್ನದಿಂದ ನಾನು ಒಬ್ಬ ಒಳ್ಳೆಯ ಉಪನ್ಯಾಸಕ ಎಂದು ಹೆಸರು ಬರಲು ನೀವುಗಳೇ ಕಾರಣಕರ್ತರು, ನನ್ನ
ವೃತ್ತಿ ಜೀವನದಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದೇನೆ ಆದರೆ ನಿಜವಾಗಿಯೂ ಅವರೆಲ್ಲಾರಿಗಿಂತ
ನೀವುಗಳೇ ನನಗೆ ಚಿರಪರಿಚಿತರಾಗಿದ್ದೀರಿ ಎಂದರು.

ಇನ್ನೂ
ಮುಂಬೈ, ಎಲ್.ಐ.ಸಿ ಪ್ರಧಾನ ಕಛೇರಿಯಲ್ಲಿ ವಿಭಾಗ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ
ವಾಹೀದ್‌ರವರು ಮಾತನಾಡಿ ನನ್ನ ಗುರುಗಳ ಜ್ಞಾನದ ಮಾರ್ಗದರ್ಶನ ನೀಡಿದ ಪ್ರತಿಫಲವಾಗಿ ನಾನು ರಾಷ್ಟ್ರದ ನಾನಾ ರಾಜ್ಯದಲ್ಲಿ ಹಾಗೂ ಸೌದಿರಾಷ್ಟ್ರಗಳಲ್ಲಿ ಎಲ್.ಐ.ಸಿ ವಿಭಾಗದಲ್ಲಿ ಅಧಿಕಾರಿಯಾಗಿ ಉತ್ತಮ ಸೇವೆ
ಸಲ್ಲಿಸುವುದಕ್ಕೆ ಸಾಧ್ಯವಾಯಿತು ಎಂದರು.

ಗುಜರಾತ್ ಬರೋಡದಿಂದ ಆಗಮಿಸಿದ ವಿಜಯ ಮಾತನಾಡಿ ನನ್ನ ಬಿ.ಕಾಂ ವ್ಯಾಸಂಗದ
ಸಹಪಾಠಿಗಳು ಏರ್ಪಡಿಸಿದ ಗುರುವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ನನಗೆ ತುಂಬಾ
ಸಂತೋಷವಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನ ಎಲ್ಲಾ ವಿದ್ಯಾರ್ಥಿ ಸಹಪಾಠಿಗಳನ್ನು
ನೋಡುವುದಕ್ಕೆ ಮತ್ತು ಮಾತನಾಡುವುದಕ್ಕೆ ಅವಕಾಶ ದೊರೆಯಿತು ಹಾಗಾಗಿ ನಾನು ಬಹಳ ದೂರದಿಂದ ಈ
ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.

ಶಿವಮೊಗ್ಗ ಎಲ್.ಐ.ಸಿ. ವಿಭಾಗ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್ ಬೇದ್ರೆ
ರವರು ಮಾತನಾಡಿ ನಾನು ಉತ್ತಮ ಮಾತುಗಾರ, ಹ್ಯಾಂಕರ್ ಮತ್ತು ಸಾಹಿತಿಗಳಾಗಿ ಹೊರಹೊಮ್ಮುವುದಕ್ಕೆ ನನ್ನ
ಗುರುಗಳ ಮಾರ್ಗದರ್ಶನ ಮತ್ತು ಪ್ರೇರಣೆ ಎಂದರು. ನನ್ನ ಗುರುಗಳು ನಾವು ವ್ಯಾಸಂಗ ಮಾಡುವಾಗಲೇ
ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ನಮಗೆ ಅರಿವು ಮೂಡಿಸುತ್ತಿದ್ದರು ಅದರ ಪ್ರತಿಫಲವಾಗಿ ಈ ದಿನ ಎಲ್.ಐ.ಸಿ
ವಲಯದಲ್ಲಿ ಅಧಿಕಾರಿಯಾಗಿ ಕೆಲಸ ಮಾಡುವ ಸೌಭಾಗ್ಯ ದೊರೆಯಿತು ಎಂದರು.

ಕಾರ್ಯಕ್ರಮಕ್ಕೆ ಆಗಮಿಸಿದ ಆನಂದಪುರ ಭದ್ರಪ್ಪ ಗೌಡರು ರಾಷ್ಟ್ರಕವಿ ಕುವೆಂಪುರವರ ಬಗ್ಗೆ
ಹಾಡುಗಳನ್ನು ಹೇಳಿದರು.
ಈ ಕಾರ್ಯಕ್ರಮಕ್ಕೆ ಗುಜರಾತ್, ಬಾಂಬೆ, ಬೆಂಗಳೂರು, ಶಿವಮೊಗ್ಗ, ಹಾವೇರಿ ಮುಂತಾದ ಕಡೆಯಿಂದ
ಸಹಪಾಠಿಗಳು ಆಗಮಿಸಿದ್ದು ಒಂದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಎಸ್.ಬಿ.ಐ ಬ್ಯಾಂಕಿನ ವ್ಯವಸ್ಥಾಪಕರಾದ ರಾಘವೇಂದ್ರ, ಎಲ್.ಐ.ಸಿ ಆಡಳಿತ
ಅಧಿಕಾರಿ ಶ್ಯಾಮಣ್ಣ, ಎ.ಎ.ಓ ವೆಂಕಟೇಶ್, ಎಚ್.ಜಿ.ಎ. ಇಂದಿರಾ, ಉಮಾ, ವಾಣಿ, ಭಾರತಿ, ಮಂಜುಳಾ,
ರಾಜೇಶ್ವರಿ, ಸತೀಶ್, ಈಶ್ವರ್ ನಾಯ್ಕ, ಶಶಿಧರ್, ಅರವಿಂದ್, ಪರಮ ಜ್ಯೋತಿ, ಶಶಿಧರ, ಸೈನಿಕ ನಾರಾಯಣ
ಇತರರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!