ಚಳ್ಳಕೆರೆ : ಕೆರೆಯ ಹೂಳು ತೆಗೆಯಲು ಅಧಿಕಾರಿಗಳು ಅವಕಾಶ ನೀಡವರೆಗೂ ಅನಿರ್ದಿಷ್ಟವಾದಿ ಧರಣಿ ನಡೆಸಲಾಗುವುದು ಎಂದು ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಕಛೇರಿ ಮುಂದೆ ಕಳೆದ ಐದು ದಿನಗಳಿಂದ ನಿರಂತರವಾಗಿ ರೈತರು ಧರಣಿ‌ ನಡೆಸಿದ್ದಾರೆ.

ಐದನೇ ದಿನಕ್ಕೆ ಕಾಲಿಟ್ಟ ಧರಣೆ
ಸ್ಪಂದಿಸದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತಿ ಕಛೇರಿ ಮುಂದೆ ಸುಮಾರು ರೈತರು ಅಂಬೇಡ್ಕರ್ ಹಾಗೂ ಗಾಂಧಿಯವರ ಪೋಟೋ ಇಟ್ಟು ಧರಣಿ ಮಾಡುವುದು ಕಂಡು ಬಂದಿದೆ.

ಇನ್ನೂ ಈ ಕೆರೆಯ ಫಲವತ್ತಾದ ಮಣ್ಣನ್ನು ರೈತರ ಜಮೀನುಗಳಿಗೆ ಸಾಗಿಸಲು ಅವಕಾಶ ನೀಡಬೇಕು
ಇದರಿಂದ ಕೆರೆಯ ಅಂತರ್ಜಾಲ ಮಟ್ಟ ಹೆಚ್ಚುವುದಲ್ಲದೆ ರೈತರ ಭೂಮಿಗಳುಗೆ ಈ ಹೂಳು ತೆಗೆದ ಮಣ್ಣನ್ನು ಹಾಕುವುದರಿಂದ ಫಲವತ್ತತೆ ಹೆಚ್ಚುತ್ತದೆ .

ಇದೇ ಪಂಚಾಯತಿಗೆ ಸೇರಿದ
ಬುಕ್ಕಂಬೂದಿ ಕೆರೆ ಮಣ್ಣು ರೈತರ ಹೊಲಗಳಿಗೆ ನೀಡುವುದಿಲ್ಲ ಎನ್ನುವುದು ಸರಿಯಲ್ಲ ಆದ್ದರಿಂದ ಅಧಿಕಾರಿಗಳ ಕೆರೆಯ ಮಣ್ಣಿನ್ನು ರೈತರ ಹೊಲಗಳುಗೆ ಫಲವತ್ತಾದ ಮಣ್ಣು ಸಾಗಿಸಲು ಅನುಮಾಡಿಕೊಬೆಕೆಂದು ಧರಣಿ ನಡೆಸಿದರು.

ಇನ್ನೂ ಸ್ಥಳಕ್ಕೆ ತಳಕು ಪೊಲೀಸ್ ಠಾಣೆಯ ಪಿಎಸ್ಐ ಲೋಕೇಶ್ ಹಾಗೂ
ಕಂದಾಯ ಅಧಿಕಾರಿ ತಳಕು ವೃತ್ತದ ತಿಪ್ಪೇಸ್ವಾಮಿ, ಹಾಗೂ ಗ್ರಾಮ ಪಂಚಾಯತಿ ಪಿಡಿಓ ಇತರ ಅಧಿಕಾರಿಗಳು ರೈತರನ್ನು ಮನವೊಲಿಸಲು ಪ್ರಯತ್ನಿಸಿದರು.

About The Author

Namma Challakere Local News
error: Content is protected !!