ಚನ್ನಮ್ಮನಾಗತಿಹಳ್ಳಿ ಎಂ.ನಾಗರಾಜು ಕೆಂಗೇರಿಗೆ ಸಾಗರ್ ಭೂಷಣ್ ಪ್ರಶಸ್ತಿ.
ಚಳ್ಳಕೆರೆ-28 ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದ ಕಲಾವಿದ, ಬೆಂಗಳೂರಿನ ಉದ್ಯಮಿ, ಕುರುಕ್ಷೇತ್ರ ನಾಟಕದ ಶಕುನಿ ಎಂದೇ ಖ್ಯಾತಿಯಾದ ಎಂ.ನಾಗರಾಜು ಕೆಂಗೇರಿಗೆ ಸಾಗರ್ ಕಲಾಭೂಷಣ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಈಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಶ್ರೀಕಲಾಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದಯಾನಂದ ಸಾಗರರವರ 104ನೇ ಜಯಂತ್ಯೋತ್ಸವ, ರಂಗಜಯಂತ್ಯೋತ್ಸವದಲ್ಲಿ ಡಾ.ಪ್ರೇಮಚಂದ್ರಸಾಗರ್, ಡಾ.ಹೇಮಚಂದ್ರಸಾಗರ್, ಹಿರಿಯ ಪತ್ರಕರ್ತ ಡಾ.ಎಸ್ಎಲ್ಎನ್ ಸ್ವಾಮಿ ಮುಂತಾದವರು ಶಕುನಿಪಾತ್ರದಾರಿ ಎಂ.ನಾಗರಾಜು ಕೆಂಗೇರಿಯವರಿಗೆ ಸಾಗರ್ ಕಲಾಭೂಷಣ್ ಪ್ರಶಸ್ತಿ ನೀಡಿದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಎಂ.ನಾಗರಾಜುಕೆಂಗೇರಿ, ಕಳೆದ ಸುಮಾರು 20 ವರ್ಷಗಳಿಂದ 104ಕ್ಕೂ ಹೆಚ್ಚು ಕುರುಕ್ಷೇತ್ರದ ಶಕುನಿ, ದುರ್ಯೋಧನ ಪಾತ್ರವನ್ನು ಯಶಸ್ವಿಯಾಗಿ ಮಾಡಿದ ತೃಪ್ತಿ ನನಗೆ ಇದೆ. ರಾಜ್ಯಮಟ್ಟದ ಈ ಪ್ರಶಸ್ತಿ ಸ್ವೀಕರಿಸಿದ ನಂತರ ನನಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಬಂದಿದೆ. ಕಲಾಸೇವೆಯನ್ನು ನಮ್ರತೆಯಿಂದ ಮುಂದುವರೆಸುವೆ ಎಂದರು.