ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ಮಕ್ಕಳ ವ್ಯಾಸಂಗ ಹಾಗೂ ನವೋದಯ ಪರೀಕ್ಷೆಗೆ ಅರ್ಜಿಸಲ್ಲಿಸಲು ಆಧಾರ್ ಕಡ್ಡಾಯವಾಗಿದ್ದು.
ಮಕ್ಕಳ ಜನನ ಪ್ರಮಾಣ ಪತ್ರ ತೆಗೆದುಕೊಂಡು ಆಧಾರ್ ಕೇಂದ್ರಗಳಿಗೆ ಹೋದರೆ ಕೈ ಬರಹ ಜನನ ಪ್ರಮಾಣ ಪತ್ರ ಬರುವುದಿಲ್ಲಆನ್ ಲೈನ್ ಜನನ ಪ್ರಮಾಣ ಪತ್ರ ತನ್ನಿ ಎನ್ನುತ್ತಾರೆ. ತಾಲೂಕು ಕಚೇರಿಗೆ ಹೋದರೆ ಅದರಲ್ಲಿ ಕನ್ನಡ ಮತ್ತು ಇಂಗ್ಲೀಷ್ ನಲ್ಲಿದೆ ಏನು ಸಮಸ್ಯೆಯಾಗುವುದಿಲ್ಲ ಅದರಲ್ಲೂ 2015 ರ 2015ಏಪ್ರೆಲ್ ನಿಂದ ಇತ್ತ ನೊಂದಣೆ ಮಾಡಿಕೊಂಡ ಜನನ ಪ್ರಮಾಣ ಪತ್ರಗಳು ಮಾತ್ರ ಆನ್ ಲೈನ್ ನಲ್ಲಿ ದೊರೆಯುತ್ತವೆ 2015 ಹಿಂದಿನವು ಕೈಬರಹ ಜನನ ಪ್ರಮಾಣ ಪತ್ರಗಳನ್ನು ಮಾತ್ರ ದೊರೆಯುತ್ತವೆ ಎನ್ನುತ್ತಾರೆ ಆದರೆ ಆಧಾರ್ ಕೇಂದ್ರಗಳಲ್ಲಿ ಮಾತ್ರ ಕೈಬರಹ ಜನನ ಪತ್ರಗಳನ್ನು ಆಧಾರ್ ತಿದ್ದುಪಡಿ ನೋಂದಣೆ ಮಾಡಲು ತಿರಸ್ಕರಿಸಲಾವುದು ಇದರಿಂದರಿಂದ ಪೋಷಕರು ಮಕ್ಕಳನ್ನು ನವೋದಯ ಪರೀಕ್ಷೆ ಹಾಗೂ ಶಾಲೆಗಳಿಗೆ ದಾಖಲಿಸಲು ಆಧಾರ್ ಕಾರ್ಡ್ ಕಡ್ಡಾಯ ಎನ್ನುತ್ತಾರೆ ತಾಲೂಕು ಕಚೇರಿಯಿಂದಲೇ ನೀಡಿದ ಕೈಬರಹ ಜನನ ಪ್ರಮಾಣ ಪತ್ರ ನೀಡಿದರೂ ಸಹ ಆನ್ ಲೈನ್ ಜನನ ಪ್ರಮಾಣ ಪತ್ರ ಕೇಳುತ್ತಾರೆ ತಾಲೂಕು ಕಚೇರಿ ಹಾಗೂ ಆಧಾರ್ ಕೇಂದ್ರಗಳಿಗೆ ತಿಂಗಳುಗಟ್ಟಲೆ ಅಲೆದಾಡಿದರೂ ಸಹ ಆಧಾರ್ ತಿದ್ದುಪಡಿ ಹಾಗೂ ನೋಂದಣೆ ಆಗದೆ ಇರುವುದರಿಂದ ಮಕ್ಕಳ ನವೋದಯ ಪರೀಕ್ಷೆ ಗೆ ಅರ್ಜಿ ಸಲ್ಲಿಸಲು ವಂಚಿತರಾಗುವಂತೆ ಮಾಡಿದೆ.
ಈಗಲಾದರೂ ಸಂಬಂದಪಟ್ಟ ಅಧಿಕಾರಿಗಳು ಕೈ ಬರಹ ಜನನ ಪ್ರಮಾಣ ಪತ್ರಗಳಿಗೆ ಆಧಾರ್ ನೋಂದಣೆ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡುವರೇ ಕಾದು ನೋಡ ಬೇಕಿದೆ. ಈ ಬಗ್ಗೆ ತಾಲೂಕು ಕಚೇರಿಯ ಜನನ.ಮರಣ ದಾಖಲೆ ಶಾಖೆಗೆ ಜನಧ್ವನಿ ಸಂಪರ್ಕಿಸಿದಾಗ 2015ಏಪ್ರೆಲ್ ನಿಂದ ಇತ್ತ ಆನ್ ಲೈನ್ ಜನನ .ಮರಣ ಪ್ರಮಾಣ ಪತ್ರಗಳು ಆನ್ ಲೈನ್ ನಲ್ಲಿ ದೊರೆಯುತ್ತವೆ 2015 ರ ಏಪ್ರೆಲ್ ಹಿಂದಿನ ಜನನ .ಮರಣ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಲಾಗಿದ್ದು ಅವುಗಳನ್ನು ಆನ್ ಲೈನ್ ಗೆ ಎಂಟ್ರಿಮಾಡಿಲ್ಲ ಹಾಗಾಗಿ ಆನ್ ಲೈನ್ ನಲ್ಲಿ ಲಭ್ಯವಾಗಿತ್ತಿಲ್ಲ ಎಂಬ ಮಾಹಿತಿ ನೀಡಿದ್ದಾರೆ.