ಚಳ್ಳಕೆರೆ :
ರಸ್ತೆ ಡಿವೈಡರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಗಂಭೀರ
ಗಾಯ
ರಸ್ತೆಯ ಡಿವೈಡರಿಗೆ ಡಿಕ್ಕಿ ಹೊಡೆದ ಬೈಕ್ ಸವಾರರೊಬ್ಬ
ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹಾನಗಲ್
ಸಮೀಪದ ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿ
150ಎ ರಲ್ಲಿ ನಡೆದಿದೆ.
ಹೆದ್ದಾರಿಯಲ್ಲಿ ತೆರಳುತ್ತಿರುವಾಗ ಡಿವೈಡರಿಗೆ
ಬೈಕ್ ಡಿಕ್ಕಿ ಒಡೆದ ಪರಿಣಾಮ ಇಬ್ಬರು ರಸ್ತೆಗೆ ಬಿದ್ದಿದ್ದು ಓರ್ವ
ಸವಾರನಿಗೆ ಗಂಭೀರ ಗಾಯವಾಗಿದ್ದು ದೇಹದ ಭಾಗಗಳಿಗೆ ಪೆಟ್ಟು
ಬಿದ್ದಿದೆ ಇನ್ನೊಬ್ಬ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣ
ಪಾಯದಿಂದ ಪಾರಾಗಿದ್ದಾರೆ.