ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮೆದುಳು ದಿನಾಚರಣೆ 22-ಜುಲೈ -2024 ಕಾರ್ಯಕ್ರಮವನ್ನು Brain Health And Prevention ಎಂಬ ಘೋಷ ವಾಖ್ಯದೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳ ನಾಡಿದ ಡಾ.ಜಿ.ಓ.ನಾಗರಾಜ್ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಮಾತನಾಡಿ ಜಿಲ್ಲೆಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಜೊತೆಯಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪ ಕರ ರಮ ಕಾರ್ಯಕ್ರಮ ಪ್ರಾರಂಭವಾಗಿದೆ ಮನುಷ್ಯನಿಗೆ ದಿನನಿತ್ಯದ ಕಾರ್ಯ ಚಟುವಟಿಕೆಗಳಿಗೆ ಮೆದುಳು ಆರೋಗ್ಯವು ಬಹು ಮುಖ್ಯ, ವಿಶೇಷವಾಗಿ ಮೆದುಳು ಆರೋಗ್ಯದಲ್ಲಿ ಡಿಮೆನ್ಷಿಯ, ಪಾರ್ಶ್ವವಾಯು, ತಲೆನೋವು, ಅಪಸ್ಮಾರ, ಮತ್ತು ಮೂರ್ಛೆರೋಗಗಳನ್ನು ಒಳಗೊಂಡಿದೆ. ಡಿಮೆನ್ಷಿಯಾದಲ್ಲಿ ಮರವು ದಾರಿ ತಪ್ಪುವುದು ಅರ್ಥ ಮಾಡಿಕೊಳ್ಳುವ ಸಮಸ್ಯೆಗಳು, ಪಾರ್ಶ್ವ ವಾಯುವಿಗೆ ದೇಹದ ಅಂಗಾಂಗಗಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಫಿಜಿಯೋಥೆರಪಿ ಮೂಲಕ ಚಿಕಿತ್ಸೆ, ಮರೆವು ಅಥವಾ ವಾಪಸ್ ಮರ ಕೈಯಲ್ಲಿದೆ ಇತ್ತೀಚಿನ ಘಟನೆಗಳನ್ನು ಮರೆಯುವುದು ಮನಸ್ಸಿಗೆ ಒತ್ತಡ ಜಾಸ್ತಿಯಾದಾಗ ತಲೆನೋವು ಅಥವಾ ಅರ್ಧ ತಲೆನೋವು ಇವುಗಳೆಲ್ಲವೂ ಕೂಡ ಮೊದಲನೇ ಸಮಸ್ಯೆಗಳಾಗಿದ್ದು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಲ್ಲಿ ನರರೋಗ ತಜ್ಞರಿಂದ ಚಿಕಿತ್ಸೆ ಪಡೆದು ಮೆದುಳು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ದಿನನಿತ್ಯ ವ್ಯಾಯಾಮ ಯೋಗ ಮತ್ತು ಧ್ಯಾನ ಮನೋರಂಜನ ಕಾರ್ಯಕ್ರಮಗಳು ಮೊದಲಾದವುಗಳ ಮೂಲಕ ದೈಹಿಕವಾಗಿ ಸಮವಹಿಸುವುದರ ಮೂಲಕ ಮೆದುಳು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ಡಾಕ್ಟರ್ ಆರ್ ಕಿರಣ್ ಗೌಡ ನರರೋಗ ತಜ್ಞರು ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಇವರು ಉಪನ್ಯಾಸದ ಮೂಲಕ ಮೆದುಳು ಆರೋಗ್ಯ ಬಗ್ಗೆ ಜಾಗೃತಿ ವಹಿಸಬೇಕು ಮೂರ್ಚಿ ರೋಗ ದಂತಹ ಕಾಯಿಲೆಗಳಲ್ಲಿ ಹಲವಾರು ಲಕ್ಷಣಗಳಿವೆ ಬಾಯಲ್ಲಿ ನೊರೆ ಬರುವುದು ಪ್ರಜ್ಞೆ ತಪ್ಪಿ ಬೀಳುವುದು ಸ್ವಲ್ಪ ಸಮಯ ಒಂದೇ ಬಂಗಿಯಲ್ಲಿರುವುದು ಕಣ್ಣುಗಳು ಬಾಯಿ ಕೈಕರಗಳು ಚಲನೆ ಇಲ್ಲದಿರುವುದು ಮುಂತಾದ ಲಕ್ಷಣಗಳು ಇರುತ್ತವೆ ಅದಕ್ಕೆ ನಾವು ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು ಆಂಟಿ ಎಪಿಲೆಫ್ಟಿಕ್ ಮಾತ್ರೆಗಳನ್ನು ವೈದ್ಯರಿಂದ ಪಡೆದು ಗುಣಮುಖರಾಗಬೇಕು, ಅದೇ ರೀತಿ ಪಾರ್ಶ್ವ ವಾಯು ಆದಾಗ ತಲೆನೋವು ಬಂದಂತಹ ಸಂದರ್ಭದಲ್ಲಿ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಪಿಜೆಷನ್ ಅಥವಾ ನರರೋಗ ತಜ್ಞರಿಂದ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬೇಕು
ದೈಹಿಕ ಚಟುವಟಿಕೆಗಳು ವ್ಯಾಯಾಮ ವಾಕಿಂಗ್ ಯೋಗ ಮತ್ತು ದಯಾನ ಸರಿಯಾದ ನಿದ್ರೆ ಇವುಗಳ ಮೂಲಕ ಮೆದುಳನ್ನು ಆರೋಗ್ಯಕರವಾಗಿ ಇರಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ.ಎಸ್ ಪಿ ರವೀಂದ್ರ ಜಿಲ್ಲಾ ಶಸ್ತ್ರಚಿಕಿತ್ಸಕರು ಜಿಲ್ಲಾ ಆಸ್ಪತ್ರೆ ಚಿತ್ರದುರ್ಗ ಇವರು ಮಾತನಾಡಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೃದಯ ಕಿಡ್ನಿ ಮತ್ತು ದೈಹಿಕ ಕಾಯಿಲೆಗಳ ಕಾರ್ಯಕ್ರಮಗಳಂತೆ ಇತ್ತೀಚಿಗೆ ಮೆದುಳು ಆರೋಗ್ಯ ಕಾರ್ಯಕ್ರಮವು ಪ್ರಾರಂಭಿಸಿರುವುದು ಎಲ್ಲರೂ ಮಾನಸಿಕವಾಗಿ ಆರೋಗ್ಯವಾಗಿರಬೇಕು, ಒತ್ತಡದ ಜೀವನದಲ್ಲಿ ನಾವೆಲ್ಲರೂ ಆಧುನಿಕ ಸಾಧನ ಸಲಕರಣೆಗಳಾದ ಮೊಬೈಲ್ ಫೋನ್ ಇಂಟರ್ನೆಟ್ ಲ್ಯಾಪ್ಟಾಪ್ ಯೂಟ್ಯೂಬ್ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಮೊದಲಾದವುಗಳಲ್ಲಿ ಅಡಿಕ್ಟ್ ಆಗಿದ್ದೇವೆ ಅವುಗಳಿಂದ ಹೊರಬಂದು ದೈಹಿಕ ವ್ಯಾಯಾಮ ಮನೋರಂಜನ ಕಾರ್ಯಕ್ರಮಗಳು ಮೊದಲಾದ ಉತ್ತಮ ಚಟುವಟಿಕೆಗಳ ಮೂಲಕ ಮೆದುಳು ಆರೋಗ್ಯವನ್ನು ಸುಧಾರಿಸಿಕೊಂಡು ತಾವೆಲ್ಲರೂ ಕೂಡ ಸ್ನೇಹಿತರಿಗೆ ಮತ್ತು ನೆರಹೊರೆಯವರಿಗೆ ತಮ್ಮ ಕುಟುಂಬಗಳಿಗೆ ಮೆದುಳು ಆರೋಗ್ಯದ ಬಗ್ಗೆ ಜಾಗೃತಿ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಬಿ ವಿ ಗಿರೀಶ್, ಎ ಬಿ ಆರ್ ಕೆ ಕೋ ಆರ್ಡಿನೇಟರ್ ಡಾಕ್ಟರ್ ಚಂದ್ರಶೇಖರ್ ರಾಜು, ಪಿಜಿ ವೈದ್ಯರಾದ ಡಾ.ಪ್ರಮೋದ್ ಭಟ್ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಮಂಜುನಾಥ ಎನ್.ಎಸ್ ನಿರೂಪಿಸಿದರು, ಶ್ರೀಧರ. ಟಿ ಕ್ಲಿನಿಕಲ್ ಸೈಕಲಾಜಿಸ್ಟ್ ಸ್ವಾಗತಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ ನವರು ವಂದಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೈ.ತಿಪ್ಪೇಶ್, ಪ್ರವೀಣ್, ಜಿಲ್ಲಾ‌ಮಾನಸಿಕ ಆರೋಗ್ಯ ಕಾರ್ಯಕ್ರಮ ದ ಸುನೀತಾ.ಎನ್, ರಶ್ಮಿ.ಕೆ.ಎಂ, ಕಭಿ ತಂಡದ ಸಂಯೋಜಕರಾದ ಶರತ್.ಪಿ, ಭಾವನ, ತಿಪ್ಪೇಸ್ವಾಮಿ, ಅರುಣಕೀರ್ತಿ.ಆರ್, ಶಿವರಾಜ.ಟಿ, ಪ್ಯಾರಮೆಡಿಕಲ್ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ನಂತರ ಜಾಥ ಕಾರ್ಯಕ್ರಮಕ್ಕೆ
ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎಸ್.ಪಿ‌. ರವೀಂದ್ರ, ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ನಾಗರಾಜ್.ಜಿ.ಓ, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಬಿ.ವಿ. ಗಿರೀಶ್ ಚಾಲನೆ ನೀಡಿದರು

Namma Challakere Local News
error: Content is protected !!