ಬಡವರ ದೀನ.ದಲಿತರ ಅಭಿವೃದ್ಧಿಗೆ ಮಾದರಿಯಾದ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಂವೈಟಿ ಸ್ವಾಮಿ.

ನಾಯಕನಹಟ್ಟಿ:: ಜುಲೈ 25. ಬಡವರ ದೀನ ದಲಿತರ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದೆ ಎಂದು ಜಿಲ್ಲಾ ಜಲ ಜಾಗೃತಿ ವೇದಿಕೆಯ ಸದಸ್ಯ ಎಂವೈಟಿ ಸ್ವಾಮಿ ಹೇಳಿದ್ದಾರೆ.

ಅವರು ಗುರುವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರ ಮಠದ ಯಾತ್ರೆ ನಿವಾಸದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ಬಿ.ಸಿ.) ಟ್ರಸ್ಟ್ ಹಾಗೂ ಮಹಿಳಾ ಜ್ಞಾನ ವಿಕಾಸ ಸಹಯೋಗದಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು ಮಹಿಳೆಯರು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬೇಕು.
ಪ್ರಸ್ತುತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಮೂರು ಲಕ್ಷ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಮಹಿಳೆಯರು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಕಾರಿ ಯಾಗಲಿದೆ ಎಂದರು.

ಪ್ರಾಸ್ತವಿಕವಾಗಿ ಸಮನ್ವಯ ಅಧಿಕಾರಿ ಪಿ. ಯಶೋಧ ಮಾತನಾಡಿದರು ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸ್ವ ಉದ್ಯೋಗ ತುಂಬಾ ಮಹತ್ವವಾದದ್ದು ಮಹಿಳೆಯರು ಸಾವಲಂಬಿಗಳಾಗಿ ಜೀವನ ನಡೆಸಲು ಸ್ವ ಉದ್ಯೋಗ ಅನುಕೂಲವಾಗುತ್ತದೆ ಎಂದರು.

ಇನ್ನೂ ತಾಲೂಕು ಯೋಜನಾಧಿಕಾರಿ ಪಿ.ಎಸ್. ಅಣ್ಣಪ್ಪ ಮಾತನಾಡಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದ್ಯಸೆ ವಿನೂತ, ವಲಯ ಮೇಲ್ವಿಚಾರಕಿ ಶಶಿಕಲಾ, ಸೇವಾ ಪ್ರತಿನಿಧಿಗಳಾದ ಶ್ರೀಮತಿ ಶೋಭಾ, ಜ್ಯೋತಿ ಮತ್ತು ಲಕ್ಷ್ಮಿ, ನಾಗರತ್ನ ಹಾಗೂ ನಾಯಕನಹಟ್ಟಿ ಕಾರ್ಯಕ್ಷೇತ್ರದ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಿದರು.

About The Author

Namma Challakere Local News
error: Content is protected !!