ಚಳ್ಳಕೆರೆ :
ಕಳ್ಳರ ಹಾವಳಿ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತದೆ, ದರೋಡೆ ಪ್ರಕರಣಗಳು, ಮೊಬೈಲ್ ಕಳ್ಳತನ, ಬೈಕ್ ಕಳ್ಳತನ, ಈಗೇ ಚಳ್ಳಕೆರೆ ನಗರದಲ್ಲಿ ಪೊಲೀಸ್ ರ ನಿದ್ದೆಗೆಡಿಸಿದ ಕಳ್ಳರು ಅಂಗನವಾಡಿ ಯಲ್ಲಿ ಇದ್ದ ಕುಕ್ಕರ್ ಪಾತ್ರಗಳನ್ನು ಬಿಡದೆ ಕಳ್ಳತನ ಮಾಡಿದ್ದಾರೆ…
ಚಳ್ಳಕೆರೆ ನಗರದ ಟಿ.ಎ ಟಿ
ಟಾಕೀಸ್ ಹಿಂಭಾದ ಎ. ಅಂಗನವಾಡಿ ಕೇಂದ್ರದ ಬೀಗ ಮುರಿದು
ಕುಕ್ಕರ್.ಪಾತ್ರೆ ಬಕೇಟ್ ಸೇರಿದಂತೆ ಅಡುಗೆ ಮಾಡುವ ಸಾಮಾಗ್ರಿಗಳನ್ನು
ಕಳವು ಮಾಡಿದ್ದು ಒಂದೇ ಸ್ಥಳದಲ್ಲಿ ನಾಲ್ಕು ಅಂಗನವಾಡಿ
ಕೇಂದ್ರಗಳಿದ್ದು ಮತ್ತೊಂದು ಅಂಗನವಾಡಿ ಕೇಂದ್ರ ಬೀಗ ಒಡೆಯಲು
ಮುಂದಾಗಿದ್ದು ಕಳವು ಪ್ರಕರಣ ವಿಫಲರಾಗಿದ್ದಾರೆ.
ಅಂಗನವಾಡಿ ಕೇಂದ
ಟಾಕೀಸ್ ಹಿಂಭಾಗದಲ್ಲಿ ಇದ್ದು
ಎಂದಿನಂತೆ ಅಂಗನವಾಡಿ ಕೇಂದ್ರ ಶಿಕ್ಷಕಿ ಕರ್ತವ್ಯಕ್ಕೆ ಬಂದಾಗ ಕಳವು
ಪ್ರಕರಣ ಬೆಳಕಿಗೆ ಬಂದಿದ್ದು ತಕ್ಷಣ ಇಲಾಖೆ ಅಧಿಕಾರಿ ಹಾಗೂ
ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ
ಪರಿಶೀಲನೆ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು
ಮಾಡಿಕೊಂಡಿದ್ದಾರೆ ಎನ್ನಲಾಗಿದೆ.