ಚಳ್ಳಕೆರೆ :
ಬಸ್ ಕದ್ದೊಯ್ದ ಕಳ್ಳರು; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಖಾಸಗಿ ಬಸ್ವೊಂದನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ
ಚಿತ್ರದುರ್ಗದಲ್ಲಿ ನಡೆದಿದೆ.
ನಾಯಕನಹಟ್ಟಿ ಮೂಲದ ಎಸ್ಆರ್
ಇ ಬಸ್ ಮಾಲೀಕ ಸಯ್ಯದ್ ಅನ್ವರ್ ಬಾಷಾ ಅವರಿಗೆ ಸೇರಿದ
ಬಸ್ ಕಳ್ಳತನವಾಗಿದ್ದು, ಈ ಬಸ್ ಚಿತ್ರದುರ್ಗ- ಚಳ್ಳಕೆರೆ- ಜಗಳೂರು
ಮಾರ್ಗದಲ್ಲಿ ಓಡಾಟ ನಡೆಸುತ್ತಿತ್ತು. ರಾತ್ರಿ ವೇಳೆ ಚಿತ್ರದುರ್ಗ
ಖಾಸಗಿ ಬಸ್ ನಿಲ್ದಾಣದಲ್ಲಿ ಇರುತ್ತಿತ್ತು.
ಇದನ್ನೇ ಹೊಂಚು ಹಾಕಿದ್ದ
ಖತರ್ನಾಕ್ ಕಳ್ಳರು, ಬಸ್ಸನ್ನೇ ಕದ್ದು ಎಸ್ಕೆಪ್ ಆಗಿದ್ದಾರೆ. ಬಸ್ ಕಳ್ಳರ
ಕಳ್ಳಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.