?ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಶ್ರೀ ಮೂಗಬಸವೇಶ್ವರ ಶಾಲೆಯ ಕಾರ್ಯದರ್ಶಿ ಕೆ.ಆರ್. ತಿಪ್ಪೇಸ್ವಾಮಿ.

ನಾಯಕನಹಟ್ಟಿ::. ಜ್ಞಾನ ವಿಕಾಸಕ್ಕೆ ಅಕ್ಷರ ಕಲಿಕೆಯೇ ಅಡಿಗಲ್ಲು ಅಕ್ಷರಭ್ಯಾಸದಿಂದ ನಿಮ್ಮ ಮಕ್ಕಳಿಗೆ ನಮ್ಮ ಶಾಲೆಗೆ ಯಶಸ್ಸು ಕಾಣಲು ಸಾಧ್ಯ ಎಂದು ಶ್ರೀ ಮೂಗಬಸವೇಶ್ವರ ಶಾಲೆಯ ಕಾರ್ಯದರ್ಶಿ ಕೆ ಆರ್ ತಿಪ್ಪೇಸ್ವಾಮಿ ಹೇಳಿದರು

ಶುಕ್ರವಾರ ಅವರು ಮಲ್ಲೂರಹಳ್ಳಿ ಶ್ರೀ ಮೂಗಬಸವೇಶ್ವರ ಹೈಟೆಕ್ ಶಾಲೆಯಲ್ಲಿ ಸರಸ್ವತಿ ದೇವಿ ಪೂಜೆ ಸಮಾರಂಭ ಹಾಗೂ ಅಕ್ಷರಭ್ಯಾಸ ಕಾರ್ಯಕ್ರಮವನ್ನು.
ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದ ಅವರು ಅಕ್ಷರ ಜ್ಞಾನ ಗುರು ಪರಂಪರೆಯಿಂದಲೇ ಎಲ್ಲರಿಗೂ ತಲುಪಬೇಕು ಪೋಷಕರು ತಮ್ಮ
ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲು ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಹೋಗಿ ಅಕ್ಷರಭ್ಯಾಸ ಮಾಡಲು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಹತ್ತರಿಂದ ಹದಿನೈದು ಸಾವಿರ ಹಣ ಖರ್ಚು ಮಾಡಿ ಅಕ್ಷರ ಅಭ್ಯಾಸ ಮಾಡಿಸಬೇಕಾಗುತ್ತದೆ. ಆದ್ದರಿಂದಲೇ ನಮ್ಮ ಶಾಲೆಯಲ್ಲಿ
ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಪೋಷಕರ ಸಮ್ಮುಖದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಇನ್ನೂ ಪೋಷಕರು ತಮ್ಮ ಮಕ್ಕಳಿಗೆ ಕೈಯಲ್ಲಿ ಅರಿಶಿನ ಕೊಂಬು ಹಾಲು ಮತ್ತು ಚಂದನದ ನೀರಿನಿಂದ ಅದ್ದಿಸುವ ಮೂಲಕ ಅಕ್ಕಿಯ ಮೇಲೆ ಅಕ್ಷರ ಅಭ್ಯಾಸ ಮಾಡಿಸುವ ಮೂಲಕ ಶಾಲೆಯ ಎಲ್ಲಾ ಪುಟಾಣಿ ಮಕ್ಕಳಿಗೂ ಅಕ್ಷರ ಅಭ್ಯಾಸ ಮಾಡಿಸಲಾಯಿತು.

ಇದೇ ವೇಳೆ ಮುಖ್ಯ ಶಿಕ್ಷಕಿ ಎಂ. ಟಿ. ಸುನಿತಾ ಮಾತನಾಡಿದ ಅವರು. ಪೋಷಕರು ತಮ್ಮ ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ಅಕ್ಷರಭ್ಯಾಸ ಮಾಡುವುದನ್ನು ಕಲಿಸಬೇಕು ಪೋಷಕರ ನಿರಂತರ ಪರಿಶ್ರಮ ಸತತ ಪ್ರಯತ್ನ ತ್ಯಾಗದಿಂದ ಮಾತ್ರ ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಸಹ ಶಿಕ್ಷಕರಾದ ಪಾಲಯ್ಯ, ಪಾಲಾಕ್ಷ. ಶಿಲ್ಪ, ಲಕ್ಷ್ಮಿ, ಜ್ಯೋತಿ, ಸಂಧ್ಯಾ, ಕೀರ್ತಿ,ಪೋಷಕರಾದ ಸೌಂದರ್ಯ, ಸುಶ್ಮಿತಾ, ಮೀನಾ ಕುಮಾರಿ,ಇದ್ದರು

About The Author

Namma Challakere Local News
error: Content is protected !!