ಚಳ್ಳಕೆರೆ :
ಹೋರಾಟ ತೀವ್ರಗೊಳಿಸಿದ ಭೂಮಿ ಮತ್ತು ವಸತಿ ಹಕ್ಕು
ಹೋರಾಟಗಾರರು
ಭೂಮಿಗಾಗಿ ಹಾಗೂ ಅದರ ಹಕ್ಕು ಪತ್ರಗಳಿಗಾಗಿ ಚಿತ್ರದುರ್ಗದಲ್ಲಿ
ಹೋರಾಟ ತೀವ್ರಗೊಂಡಿದೆ.
ಭೂಮಿ ಮತ್ತು ವಸತಿ ಹಕ್ಕು
ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ
ಬಳಿ ಹೋರಾಟ ನಡೆಸಿದರು.
ಮೆರವಣಿಗೆ ಮೂಲಕ ಬಂದ
ಹೋರಾಟಗಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು
ಹಾಕಿದರು.
ಸರ್ಕಾರ ಹಕ್ಕು ಪತ್ರ ನೀಡುವಲ್ಲಿ ವಿಳಂಬ ಮಾಡುತ್ತಿದ್ದು,
ಇದರ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರ ಗೊಳಿಸಲಾಗುತ್ತದೆ
ಎಂದು ಎಚ್ಚರಿಸಿದರು.