ಚಳ್ಳಕೆರೆ :
ಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಕಾರ್ಯ
ಪಟ್ಟಣದ ಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ ಆಷಾಢ ಶುದ್ಧ
ಪ್ರಥಮ ಏಕದಶಿ ಪ್ರಯುಕ್ತ ಶ್ರೀ ಪಾಂಡುರಂಗ ಸ್ವಾಮಿ ರುಕುಮ
ಬಾಯಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಾಂಡುರಂಗ
ಸ್ವಾಮಿ ಹಾಗೂ ದುರ್ಗಾದೇವಿ ದೇವಸ್ಥಾನಗಳಲ್ಲಿ ದಿನವೂ ಭಜನೆ
ಕಾರ್ಯಕ್ರಮ ನಡೆಯುತ್ತಿದ್ದು
ಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ
ವಿಷ್ಣು ಸಹಸ್ರ ನಾಮಾವಳಿ, ಪೂರ್ವಕ ಪಂಚಾಮೃತ ಅಭಿಷೇಕ,
ಕುಂಕುಮ ಅರ್ಚನೆ ಸೇರಿದಂತೆ ಧಾರ್ಮಿಕ ಆಚರಣೆಗಳು
ನೆರವೇರಿದವು.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
ಮಹಿಳೆಯರು ಪಾಲ್ಗೊಂಡಿದ್ದರು.