ನಲಗೇತನಹಟ್ಟಿ ಗ್ರಾಮಸ್ಥರು ಸಡಗರ ಸಂಭ್ರಮದಿಂದ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಣೆ.

ನಾಯಕನಹಟ್ಟಿ:: ಜುಲೈ 17. ನಮ್ಮ ಭಾರತ ದೇಶದಲ್ಲಿ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಎರಡು ಸಮುದಾಯಗಳು ಸೇರಿ ಆಚರಣೆ ಮಾಡುವುದು ಹೆಮ್ಮೆಯ ಸಂಗತಿಯಾಗಿದೆ .

ಹೌದು ಇದು ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಅಮಾವಾಸ್ಯೆಯಾದ ಮೂರು ದಿನಗಳ ಬಳಿಕ ಗುದ್ದಲಿ ಹಾಕಿ ನಂತರ ಪೀರಲ ದೇವರುಗಳನ್ನು ಪ್ರತಿಷ್ಠಾಪನೆ ಆಗುತ್ತದೆ.
ಐದು ದಿನಗಳ ಕಾಲ ಗ್ರಾಮದಲ್ಲಿ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ ಹರಿಕೆ ಹೂತ್ತವರು ಕಾವಸೇನಾ ಕೊಡ ಮುಸುವ ವಿವಿಧ ವೇಷಗಳನ್ನು ಧರಿಸುತ್ತಾರೆ ಇದು ಮೊಹರಂ ಕೊನೆ ದಿನದವರೆಗೂ ಇರುತ್ತದೆ ಪೀರಲ ದೇವರು ಹೊಳೆಗೆ ಹೋಗುವ ದಿನದೆಂದು ಅಗ್ನಿ ಹಾಯುವ ಆಚರಣೆಯನ್ನು ನಡೆಯುತ್ತಿದೆ
ಗ್ರಾಮಸ್ಥರ ಸಮ್ಮುಖದಲ್ಲಿ ಚಿಕ್ಕ ಕೆಂಡೋತ್ಸವ ನಂತರ ದೊಡ್ಡ‌ಕೆಂಡೋತ್ಸವ ನಂತರ ಗ್ರಾಮದ ಯುವಕರು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮ ಸಡಗರದಿಂದ ಮೊಹ ಕೊನೆಗೊಂಡಿತು ಒಟ್ಟಾರೆ ಹಿಂದೂ ಮುಸ್ಲಿಂ ಸ್ನೇಹ ಸಂಕೇತ ಹಬ್ಬ ಅದ್ದೂರಿಯಾಗಿ ಜರುಗಿತು.

ನಮ್ಮ ಗ್ರಾಮದಲ್ಲಿ ಪೂರ್ವಿಕರ ಕಾಲದಿಂದಲೂ ಶ್ರದ್ಧ ಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ ಅಲೈ ದೇವರು ಭಕ್ತರ ಇಷ್ಟಾರ್ಥ ಪೂರೈಸುವ ದೇವರೆಂದೇ ಖ್ಯಾತಿಗಳಿಸಿದೆ ನಮ್ಮ ಸಮಸ್ತ ಊರಿನ ಗ್ರಾಮಸ್ಥರು ಮೊಹರಂ ಸಂದರ್ಭದಲ್ಲಿ ದೇವರಿಗೆ ಸಕ್ಕರೆ ಅರ್ಪಿಸಿ ಭಕ್ತಿ ಸಮರ್ಪಿಸುವುದು ವಾಡಿಕೆ.ಎಂದು
ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಪಿ.ಎನ್. ಮುತ್ತಯ್ಯ. ಹೇಳಿದರು.

ಇದೇ ಸಂದರ್ಭದಲ್ಲಿ ನಲಗೇತನಹಟ್ಟಿ ಗ್ರಾಮದ ಗುರು ಹಿರಿಯರು. ಹಾಗೂ ಮುಸ್ಲಿಂ ಸಮುದಾಯದ ಮುಖಂಡರು. ಯುವಕರು. ಮತ್ತು ನಲಗೇತನಹಟ್ಟಿ ಸಮಸ್ತ ಊರಿನ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!