ಚಳ್ಳಕೆರೆ : ಜಾಜೂರು ಗ್ರಾಮದಲ್ಲಿ ಎಸ್ಸಿ ಕಾಲೋನಿಯ ಹಲವು ಪಡಿತರ ಚೀಟಿಯ ಕಾರ್ಡುಗಳನ್ನು ಹೊಸ ನ್ಯಾಯಬೆಲೆ ಅಂಗಡಿಗೆ ವರ್ಗಾಯಿಸಿರುವುದು ಖಂಡನೆಯ .
ನಮ್ಮ ಅಭಿಪ್ರಾಯ ಪಡೆಯದೆ ಏಕಾಏಕಿ ಹೊಸ ನ್ಯಾಯಬೆಲೆ ಅಂಗಡಿಗೆ ವರ್ಗಾಯಿಸಿರುವುದು ಸರಿಯಲ್ಲ ನಮಗೆ ಹಿಂದೆ ಇದ್ದ ಹಳೆಯ ನ್ಯಾಯಬೆಲೆ ಅಂಗಡಿಯಲ್ಲೇ ನಮ್ಮ ಕಾರ್ಡ್ ಉಳಿಸಬೇಕು ಎಂದು ತಹಶಿಲ್ದಾರ್
ರೆಹಾನ್ ಪಾಷಾ ಗೆ ಮನವಿ ಸಲ್ಲಿಸಿದರು.
ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದಲ್ಲಿ ನೂತನವಾಗಿ ಹೊಸ ನ್ಯಾಯಬೆಲೆ ಅಂಗಡಿಗೆ ಸರ್ಕಾರದಿಂದ ಆದೇಶವಾಗಿದ ಹಿನ್ನೆಲೆಯಲ್ಲಿ ಹಿಂದೆ ಇದ್ದ ಸ್ವಲ್ಪ ಪ್ರಮಾಣದ ಕಾರ್ಡುಗಳನ್ನು ಹೊಸ ನ್ಯಾಯಬೆಲೆ ಅಂಗಡಿಗೆ ವರ್ಗಾಯಿಸಿ ಸೇರ್ಪಡೆಗೊಂಡಿದ್ದರಿಂದ ಸ್ಥಳೀಯ ನಿವಾಸಿಗಳು ನಮಗೆ ಹಳೆಯ ನ್ಯಾಯಬೆಲೆ ಅಂಗಡಿಯಲ್ಲಿ ಕಾರ್ಡುಗಳನ್ನು ಉಳಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಒತ್ತಾಯಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಊರಿನ ಮುಖಂಡರಾದ ರಾಮಾಂಜನೇಯ, ಜೆಎಸ್ ವಿಶ್ವನಾಥ್, ಚಂದ್ರಶೇಖರ್ , ರಾಮಲಿಂಗಪ್ಪ, ಸ್ವಾಮಿ, ತಿಪ್ಪಯ್ಯ ,ಮಂಜುನಾಥ್, ಓಬಳೇಶ್, ಇನ್ನು ಹಲವರು ಹಾಜರಿದ್ದರು