ಚಳ್ಳಕೆರೆ :
ಕಳಪೆ ಕಾಮಗಾರಿಯಿಂದ ತೋಟ ನಾಶ: ರೈತರ
ಆಕ್ರೋಶ
ಹೊಳಲ್ಕೆರೆಯ ಹಿರೇಕೆರೆಯು ತುಂಬಿದಾಗ ನಿರ್ಮಿಸಿರುವ ಏರಿಯು
ಕಿರಿದಾಗಿದ್ದು, ಈ ಹಿನ್ನೀರಿಗೆ ಸುಮಾರು 50 ಎಕರೆ ಅಡಿಕೆ,
ತೆಂಗಿನ ತೋಟ, ಹಾಗೂ ಜಮೀನುಗಳು ಮುಳುಗಡೆಯಾಗಿದ್ದು,
ಕೂಡಲೇ ಕ್ರಮತೆಗೆದುಕೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.
ಅವರು ಹೊಳಲ್ಕೆರೆ ಅಂತರ್ಜಲ ಅಭಿವೃದ್ಧಿ ಇಲಾಖೆ ಇಂಜಿನಿಯರ್
ಗೆ ಮನವಿಯನ್ನು ನೀಡಿದ್ದಾರೆ.
ಜಮೀನುಗಳಲ್ಲಿ ಬಹಳ ದಿನ
ನೀರು ನಿಂತು ಲಕ್ಷಾಂತರ ಮೌಲ್ಯದ ಅಡಿಕೆ, ತೆಂಗಿನ ತೋಟಗಳು
ಹಾಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.