ಚಳ್ಳಕೆರೆ :
ಕೊಟ್ಟ ಮಾತಿನಂತೆ ನಡೆಯಬೇಕು: ಗೌಸ್ ಪೀರ್
ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನದಿಂದ ಕಿಟ್
ಗಳನ್ನು ಖರೀದಿವುದು ಬೇಡ, ಸರ್ಕಾರದ ಬೇರೆ ಹಣದಲ್ಲಿ
ಕಿಟ್ ಗಳನ್ನು ಖರೀದಿಸಿಕೊಡಬೇಕೆಂದು ಸಿಐಟಿಯು ಜಿಲ್ಲಾ
ಪ್ರಧಾನ ಕಾರ್ಯದರ್ಶಿ, ಗೌಸ್ ಪೀರ್ ಒತ್ತಾಯಿಸಿದರು.
ಅವರು
ಚಿತ್ರದುರ್ಗದಲ್ಲಿ ಪ್ರತಿಭಟನೆಯಲ್ಲಿ ಮಾತಾಡಿದರು. ನೀವು
ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿನಂತೆ ನಡೆಯಬೇಕು,
ಸಚಿವ ಸಂತೋಷ್ ಲಾಡ್ ಅವರೇ, ಹಿಂದಿನ ಸರ್ಕಾರ ಮಾಡಿದ
ತಪ್ಪನ್ನೆ ಮಾಡುತ್ತಿದ್ದೀರಿ, ಎಂದು ಆಕ್ರೋಶ ಹೊರ ಹಾಕಿದರು.