ಚಳ್ಳಕೆರೆ :
ಅಪ್ಪರ್ ಭದ್ರಾ ಪೂರ್ಣ ಗೊಳ್ಳದೆ ಚಿತ್ರದುರ್ಗ ಅಭಿವೃದ್ಧಿ
ಸಾಧ್ಯವಿಲ್ಲ
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳದಿದ್ದರೆ, ಚಿತ್ರದುರ್ಗ
ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಚಿತ್ರದುರ್ಗ ಲೋಕಸಭಾ
ಸದಸ್ಯ ಗೋವಿಂದ ಕಾರಜೋಳ ಹೇಳಿದರು.
ಅವರು
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ರಾಜ್ಯ
ಸರ್ಕಾರದಿಂದ ಕೇಂದ್ರ ಸರ್ಕಾರದ ಹಂತದವರೆಗೂ ನಾನು
ಅನುದಾನ ತರಲು ಹಾಗೂ ಯೋಜನೆ ಪೂರ್ಣಗಳಿಸಲು
ಒತ್ತಡ ಹಾಕುತ್ತೇನೆ.
ಫಾರೆಸ್ಟ್ ಕ್ಲಿಯರೆನ್ಸ್ ಗೆ ಡಿಸಿ, ಸಿಇಒ ಮತ್ತು
ಅರಣ್ಯಾಧಿಕಾರಿಗಳ ಬಳಿ ಮಾತಾಡಿದ್ದೇನೆ ಎಂದರು.