ಹೋಬಳಿಯ ಜನರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೊಹರಂ ಹಬ್ಬವನ್ನು ಆಚರಿಸಬೇಕು . ಪಿ ಎಸ್ ಐ ದೇವರಾಜ್ ಕರೆ.
ನಾಯಕನಹಟ್ಟಿ:: ಜುಲೈ 13. ಹೋಬಳಿಯ ಜನರು ಮೊಹರಂ ಹಬ್ಬವನ್ನು ಸರ್ವಧರ್ಮೆಯರು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಪಿಎಸ್ಐ ದೇವರಾಜ್ ಹೇಳಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೊಹರಂ ಹಬ್ಬದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದೂ- ಮುಸ್ಲಿಂ ಸೌಹಾರ್ದಕ್ಕ ಹೆಸರುವಾಸಿಯಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿವಾಗಿತವಾಗಿ ಆಚರಿಸಬೇಕು. ಹೋಬಳಿಯ ಪ್ರತಿ ಗ್ರಾಮಗಳಲ್ಲಿ ಮೊಹರಂ ಹಬ್ಬವನ್ನು ಆಚರಣೆ ಮಾಡುವುದು ವಾಡಿಕೆ ಮೊಹರಂ ಹಬ್ಬದಲ್ಲಿ ಚಿಕ್ಕ ಕೆಂಡೋತ್ಸವ ಮತ್ತು ದೊಡ್ಡ ಕೆಂಡೋತ್ಸವ ದಿನ ಗ್ರಾಮದ ಹಿರಿಯರು ಜವಾಬ್ದಾರಿ ವಹಿಸಿ ಧಾರ್ಮಿಕ ಆಚರಣೆಗೆ ಯಾವುದೇ ಧಕ್ಕೆ ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು.
ಇನ್ನೂ ಕೆಂಡೋತ್ಸವ ವೇಳೆ ಚಿಕ್ಕ ಮಕ್ಕಳು ಯಾರು ಸಹ ಹತ್ತಿರ ಬಿಟ್ಟುಕೊಳ್ಳದಂತೆ ಮಧ್ಯಪಾನ ಸೇವಿಸಿದವರನ್ನು ದೂರವರಿಸಿ ಸರ್ವಧರ್ಮೇಯರು ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಣೆ ಮಾಡಬೇಕು.
ಇನ್ನೂ ಪ್ರತಿ ಗ್ರಾಮದ ಮುಖಂಡರು ಪೀರಗಳನ್ನು ದಫನ ಮಾಡುವಾಗ ನಿಮ್ಮ ಮಾರ್ಗಗಳನ್ನು ನಮಗೆ ತಿಳಿಸಿ ತಂಟೆ ತಕರಾರು ಮಾಡದೆ ಹಬ್ಬ ಆಚರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಪಿಎಸ್ಐ -2 ಕೆ. ಶಿವಕುಮಾರ್,ಎ ಎಸ್ ಐ
ಆರ್.ಕೆ. ತಿಪ್ಪೇಸ್ವಾಮಿ,
ಹೋಬಳಿಯ ಮುಖಂಡರಾದ ಎಂ ಚಿನಯ್ಯ ರೇಖಲಗೆರೆ, ಬಗರ್ ಹುಕುಂ ಕಮಿಟಿ ಸದಸ್ಯ ಪಿ.ಜಿ. ಬೋರನಾಯಕ, ಎನ್ ಮಹದೇವಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ತಿಪ್ಪೇಸ್ವಾಮಿ , ಎನ್ ದೇವರಹಳ್ಳಿ ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಡಾ. ಕಾಟಂಲಿಂಗಯ್ಯ,
ಸದಸ್ಯ ಎಸ್ ಸಿದ್ದಪ್ಪ, ನಲಗೇತನಹಟ್ಟಿ ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ, ಜಿ ಸಿ ಗೌಡ್ರು ಬೋರಯ್ಯ, ಬಿ.ಎನ್, ನಿಂಗರಾಜ್, ರೇಡಿಯೋ ಸಣ್ಣಬೋರಯ್ಯ, ಎಂ. ಬಿ ಸಣ್ಣ ಬೋರಯ್ಯ, ಎಂ ಪಿ ಮಂಜುನಾಥ್, ಪೊಲೀಸ್ ಪೇದೆಗಳಾದ ಭಾಷಾ, ಅಣ್ಣಪ್ಪ ನಾಯ್ಕ, ರುದ್ರಮುನಿ, ಸತೀಶ್, ಅಶ್ವಥ್, ಬಿ ಪಿ ರಾಮಕೃಷ್ಣ, ಮಹಿಳಾಪೇದೆ ಭಾಗ್ಯಮ್ಮ, ಇದ್ದರು