ಡಾ. ಬಾಬು ಜಗಜೀವನ್ ರಾಮ್ ಭವನ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಹಾಗೂ ಸಂಶೋಧಕರ ಕೇಂದ್ರವಾಗಿ ಹೊರಹೊಮ್ಮಲಿ. ಹಿರಿಯ ದಲಿತ ಮುಖಂಡ ತೊರೆಕೋಲಮ್ಮನಹಳ್ಳಿ ಆರ್. ಬಸಪ್ಪ,

ನಾಯಕನಹಟ್ಟಿ:: ಜುಲೈ 13 .
ಡಾ. ಬಾಬು ಜಗಜೀವನ್ ರಾಮ್ ಸಂಶೋಧನ ಕೇಂದ್ರ ರಾಜ್ಯದ ದಲಿತ ಜನಾಂಗದ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಅಧ್ಯಯನ ಮಾಡಲಿಕ್ಕೆ ರಾಜ್ಯದ ದೊಡ್ಡ ಸಂಶೋಧನೆ ಕೇಂದ್ರವಾಗಿದೆ ಎಂದು ಹಿರಿಯ ದಲಿತ ಮುಖಂಡ ತೊರೆಕೋಲಮ್ಮನಹಳ್ಳಿ ಆರ್ ಬಸಪ್ಪ ಹೇಳಿದ್ದಾರೆ.

ಶನಿವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬೆಂಗಳೂರು ಬಾಬು ಜಗಜೀವನ್ ರಾಮ್ ಸಂಶೋಧನ ಕೇಂದ್ರ ಉದ್ಘಾಟನೆ ಕಾರ್ಯಕ್ರಮಕ್ಕೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಹಾಗೂ ನಾಯಕನಹಟ್ಟಿ ಹೋಬಳಿಯ ದಲಿತ ಮುಖಂಡರು ಸೇರಿ ಬೆಂಗಳೂರಿಗೆ ಹೊರಟ ಸಂದರ್ಭದಲ್ಲಿ ಮಾತನಾಡಿದ ಅವರು ಬೆಂಗಳೂರಿನ ಬಾಬು ಜಗಜೀವನ್ ರಾಮ್ ಸಂಶೋಧನಾ ಕೇಂದ್ರ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಜನಸಾಗರ ಹರಿದು ಬರುತ್ತಿದ್ದು ಚಿತ್ರದುರ್ಗ ಚಳ್ಳಕೆರೆ ಮೊಳಕಾಲ್ಮೂರು ಕ್ಷೇತ್ರದ ನಾಯಕನಹಟ್ಟಿ ಹೋಬಳಿಯ ದಲಿತ ಮುಖಂಡರು ಸಂಘಟನೆಕಾರರು ಇಂದು ಬೆಂಗಳೂರಿಗೆ ಬಾಬು ಜಗಜೀವನ್ ರಾಮ್ ರವರ ಭವನದ ಉದ್ಘಾಟನಾ ಸಮಾರಂಭಕ್ಕೆ ಇಡೀ ಜಿಲ್ಲೆಯಾದ್ಯಂತ ಕಾರ್ಯಕರ್ತರು ಅಭಿಮಾನಿಗಳು ಸಂಘಟಕರು ಪದಾಧಿಕಾರಿಗಳು ಬೆಂಗಳೂರಿಗೆ ತೆರಳುತ್ತಿದ್ದು.
ಕರ್ನಾಟಕದ ಇತಿಹಾಸದಲ್ಲಿ ಈ ಭವನ ಬಹಳ ಅದ್ಭುತವಾದ ಎಲ್ಲಾ ದಲಿತ ಜನಾಂಗದ ಹಿಂದುಳಿದ ವರ್ಗದವರಿಗೆ ಅಲ್ಪಸಂಖ್ಯಾತರಿಗೆ ಅಧ್ಯಯನ ಮಾಡಲಿಕ್ಕೆ ಇದು ದೊಡ್ಡ ಸಂಶೋಧನ ಕೇಂದ್ರವಾಗಿ ಹೊರಹೊಮ್ಮಲಿದೆ ಇದರ ಸದುಪಯೋಗವನ್ನು ಎಲ್ಲಾ ದಲಿತ ಮುಖಂಡರು ವಿದ್ಯಾರ್ಥಿಗಳು ಸಾಹಿತಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಬಿ. ಶಂಕರ್ ಸ್ವಾಮಿ, ಎನ್ ಮಹದೇವಪುರ ಗ್ರಾಮ ಪಂಚಾಯತಿ ಸದಸ್ಯ ಎಂ. ಓಬಳೇಶಪ್ಪ, ಎತ್ತಿನಹಟ್ಟಿ ತಿಪ್ಪೇಸ್ವಾಮಿ, ತೊರೆ ಕೋಲಮ್ಮನಹಳ್ಳಿ, ತಿಮ್ಮೇಶೆಟ್ಟಿ ನಲಗೇತನಹಟ್ಟಿ ಪೂಜಾರಿ ತಿಮ್ಮಯ್ಯ, ಪೂಜಾರಿ ಮುತ್ತಯ್ಯ, ಕೆ.ಬಿ. ತಿಪ್ಪೇಸ್ವಾಮಿ. ಪಿ. ವಿ. ಓಬಳೇಶ್ ,ಅಬ್ಬೇನಹಳ್ಳಿ ನಾಗರಾಜ್, ಗೌಡಗೆರೆ ದುರುಗೇಶ್,
ತೊರೆಕೋಲಮ್ಮನಹಳ್ಳಿ ಮಧು, ನಲಗೇತನಹಟ್ಟಿ ಡಿ. ಟಿ ಬಸವರಾಜ್, ಇದ್ದರು

Namma Challakere Local News
error: Content is protected !!