ಚಳ್ಳಕೆರೆ :
ಕಸದ ರಾಶಿಯಿಂದ ತುಂಬಿ ತುಳುತ್ತಿರುವ ಚಂದ್ರವಳ್ಳಿ
ಚಿತ್ರದುರ್ಗದ ಪ್ರವಾಸಿ ತಾಣ ಚಂದ್ರವಳ್ಳಿ ಹಾಗು ರಸ್ತೆಗಳ
ಇಕ್ಕೆಲಗಳು, ಇಂದು ಕಸದ ರಾಶಿಯಿಂದ ತುಂಬಿ ತುಳುಕುತ್ತಿವೆ.
ರಾಜ್ಯದಲ್ಲಿ ಡೆಂಗ್ಯೂ ರೋಗವು ಹರಡುತ್ತಿದ್ದು, ಸಾರ್ವಜನಿಕರು
ಪ್ರವಾಸಿ ತಾಣ ಚಂದ್ರವಳ್ಳಿ ಹಾಗೂ ಅದರ ಇಕ್ಕೆಲ ರಸ್ತೆಗಳಲ್ಲಿ ಊಟ
ಮಾಡಿದ ತಟ್ಟೆಗಳನ್ನು ಬಿಸಾಡಿ ಕಸದ ರಾಶಿಯನ್ನು ಸೃಷ್ಠಿಸಿದ್ದಾರೆ.
ಪರಿಸರ ಹಾಳಾಗುತ್ತಿದ್ದು, ಡೆಂಗ್ಯೂ ಹರಡುವಿಕೆ ತಡೆಗಟ್ಟಲು,
ಸ್ವಚ್ಚತೆ ಕಾಪಾಡಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ
ಕೆಟಿಶಿವಕುಮಾರ್ ಮನವಿ ಮಾಡಿದ್ದಾರೆ.