ಚಳ್ಳಕೆರೆ :
ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳಿಂದ
ಪ್ರತಿಭಟನೆ
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಹಾಸ್ಟೆಲ್
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಹಾಸ್ಟೆಲ್ ನಲ್ಲಿ ಸ್ವಚ್ಚತೆ,
ಆಹಾರ ಸರಿಯಿರುವುದಿಲ್ಲ. ಊಟದಲ್ಲಿ ಹುಳು ಬಿದ್ದಿರುತ್ತದೆ.
ತರಕಾರಿ ಕೊಳೆತಿರುತ್ತದೆ.
ಇಂತಹ ಕಳಪೆ ಗುಣಮಟ್ಟದ ಊಟ
ಮಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಇದನ್ನು ಸರಿಪಡಿಸಬೇಕೆಂದು
ಆಗ್ರಹಿಸಿದರು.
ಹಾಸ್ಟೆಲ್ ವಾರ್ಡನ್ ಕೂಡ ವಾರಕ್ಕೆ ಒಂದು ಸಾರಿ
ಬರುತ್ತಾರೆ. ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.