ಚಳ್ಳಕೆರೆ :
ಒಂಟಿ ಮನೆಯ ದರೋಡೆ ಪ್ರಕರಣ ಮಾಸುವ ಮುನ್ನವೇ ಚಳ್ಳಕೆರೆ ಜನತೆ ಬೆಚ್ಚಿ ಬೀಳಿಸುವ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿರುವುದು ಪೊಲೀಸರ ನಿದ್ದೆಗೇಡಿಸುವಂತೆ ಮಾಡಿದೆ.
ಹೌದು ಹಿರೇಹಳ್ಳಿ ಗ್ರಾಮದಲ್ಲಿ ಕೈ ಕಾಲು ಕಟ್ಟಿ ಮನೆಯಲ್ಲಿದ್ದ ಹಣ ದೋಚಿ ಪರಾರಿಯಾದ ಕಳ್ಳರು
ಈ ಕೃತ್ಯದಿಂದ ಬೆಚ್ಚಿ ಬಿದ್ದ ಗ್ರಮಸ್ಥರು.
ಚಳ್ಳಕೆರೆ
ತಾಲೂಕಿನ ಹಿರೆಹಳ್ಳಿ ಗ್ರಾಮದ ವ್ಯಾಪಾರಿ ಜಿ.ಬಿ.ತಿಪ್ಪೇಸ್ವಾಮಿ ಮನೆಗೆ
ಮೂರು ಜನ ಕಳ್ಳರು ಸೋಮವಾರ ತಡ ರಾತ್ರಿ ಮನೆಯ ಬಾಗಿಲು ಮುರಿದು
ಒಳ ನುಗ್ಗಿ ತಿಪ್ಪೇಸ್ವಾನಿಯನ್ನು ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ ಮನೆಯಲ್ಲಿದ್ದ
ಒಡವೆ ಹಣ ನೀಡದಿದ್ದರೆ ಜೀವ ತೆಗೆಯುವುದು ಬೆದರಿಕೆ ಹಾಕಿದ್ದು
ಮಗನ ಕೋಣೆಯಲ್ಲಿದ್ದ 2500 ರೂ ಹಾಗೂ ಬೀರುವಿನಲ್ಲಿದ್ದ
ಸುಮಾರು 4.5 ಲಕ್ಷ ರೂ ಕದ್ದು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ
ಶ್ವಾನದಳ. ಬೆರಳಚ್ಚು ತಜ್ಞರು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ
ಧರ್ಮೇಂದ್ರ ಕುಮಾರ್ ಮೀನಾ, . ಡಿವೈಎಸ್ಪಿ ರಾಜಣ್ಣ ಸೇರಿದಂತೆ ಭೇಟಿ ನೀಡಿ
ಪರಿಶೀಲನೆ ನಡೆಸಿದ್ದು
ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ