ಚಳ್ಳಕೆರೆ :
ತಾಲೂಕಿನಲ್ಲಿ 32 ಡೆಂಗ್ಯೂ ಪ್ರಕರಣಗಳು
ಪತ್ತೆಯಾಗಿದ್ದು
ಅತಿ ಹೆಚ್ಚು ಸಿದ್ದೇಶ್ವನ ದುರ್ಗದಲ್ಲಿ ವರದಿಯಾಗಿವೆ.
ಇದಕ್ಕೆ
ಕಡಿವಾಣ ಹಾಕಲು ಅಗತ್ಯ ಕ್ರಮಕೊಳ್ಳುವಂತೆ ತಾಪಂ ಇಒ.ಶಶಿಧರ್
ಸೂಚನೆ ನೀಡಿದ್ದಾರೆ.
ನಗರದ ತಾಲೂಕು ಪಂಚಾಯತ
ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆ. ಸಂಜೀವಿನಿ ಮಹಿಳಾ ಒಕ್ಕೂಟ,
ನೈರ್ಲ್ಯಯ ಸಮಿತಿಗೆ ಆಯೋಜಿದ್ದ ಡೆಂಗ್ಯೂ ನಿಯಂತ್ರಣ ಪೂರ್ವಭಾವಿ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮದ ಪ್ರತಿ ಮನೆ
ಮನೆಗೆ ಹೋಗಿ ಲಾರ್ವ ತಪಾಸಣೆ ಮಾಡಬೇಕು, ಯಾರಿಗಾದರು
ಚಳಿ, ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ ವಹಿಸದೆ ಸಮೀಪದ ಆರೋಗ್ಯ
ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸುವಂತೆ ತಿಳಿಸಬೇಕು.
ಗ್ರಾಮೀಣ ಭಾಗದಲ್ಲಿ ಡೆಂಗ್ಯೂ ಸೇರಿದಂತೆ ಸಾಂಕ್ರಮಿಕ ರೋಗಗಳು
ಹರಡದಂತೆ ಅಗತ್ಯ ಮುಂಜಾಗೃತೆ ವಹಿಸ ಬೇಕು ಡೆಂಗ್ಯೂ
ಉಲ್ಬಣವಾದರೆ ಹತೋಟಿಗೆ ತರಲು ಕ್ರಮವಹಿಸಬೇಕು. ಪ್ರಾರಂಭದಲ್ಲಿ ಚಿಕಿತ್ಸೆ
ಪಡೆದರೆ ಗುಣ ಮುಖರಾಗಲು ಸಾಧ್ಯ
ಆರೋಗ್ಯ ಇಲಾಖೆ.
ಗ್ರಾಮಪಂಚಾಯಿತಿ, ನೈರ್ಮಲ್ಯ ಸಮಿತಿ, ಸಂಜೀವಿನ ಒಕ್ಕೂಟ
ಜಂಟಿಯಾಗಿ ಸಾಂಕ್ರಮಿಕ ರೋಗ ಹರಡದಂತೆ ಸಾರ್ವಜನಿಕರಿಗೆ
ಅರಿವು ಮೂಡಿಸಬೇಕು, ಡೆಂಗ್ಯೂ ಪ್ರಕರಣ ಕಂಡು ಬಂದರೆ
ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಯಾಗುತ್ತೀರಿ.
ಕೋವಿಡ್
ಸೋಂಕು ಹತೋಟಿಗೆ ಯಾವ ರೀತಿ ಕರ್ತವ್ಯ ನಿರ್ವಹಿಸಿದಿರೋ ಅದೇ
ರೀತಿ ಡೆಂಗ್ಯೂ ಹತೋಟಿಗೆ ಮುಂದಾಗ ಬೇಕು ಎಂದರು.
ಸಭೆಯಲ್ಲಿ
ಆರೋಗ್ಯ ಇಲಾಖೆ, ಸಜೀವಿನಿ, ನೈರ್ಮಲ್ಯ ಸಮಿತಿ ಅಧಿಕಾರಿ
ಸಿದ್ದಂದಿಗಳಿದ್ದರು