ಚಳ್ಳಕೆರೆ :
ದಶಕಗಳು ಕಳೆದರೂ ಜಮೀನುಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ
ಹೊಸದುರ್ಗ ತಾಲ್ಲೂಕಿನಲ್ಲಿ ಅರ್ಹ ಬಗರ್ ಹುಕುಂ
ಸಾಗುವಳಿದಾರರಿಗೆ ತ್ವರಿತವಾಗಿ, ಹಕ್ಕುಪತ್ರ ನೀಡುವಂತೆ
ಸರ್ಕಾರಕ್ಕೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಒತ್ತಾಯಿಸಿದೆ.
ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಕರ್ನಾಟಕ
ಭೂ ಹಕ್ಕುದಾರರ ವೇದಿಕೆ ಗ್ರಾಮ ಅಧ್ಯಕ್ಷ ಕೃಷ್ಣಮೂರ್ತಿ,
ಹಲವಾರು ವರ್ಷಗಳಿಂದ ಭೂಮಿ ಸಾಗುವಳಿ ಮಾಡುತ್ತಿರುವ,
ರೈತರು ಭೂಮಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿ ದಶಕಗಳೇ ಕಳೆದಿವೆ,
ಆದರೆ ಜಮೀನುಗಳ ಹಕ್ಕು ಪತ್ರ ಸಿಕ್ಕಿಲ್ಲವೆಂದು ಅಸಮಾಧಾನ
ವ್ಯಕ್ತಪಡಿಸಿದರು.