ಚಳ್ಳಕೆರೆ :
ಚಳ್ಳಕೆರೆ ನಗರ ಈಡೀ ಜಿಲ್ಲೆಯಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.
ಆದರೆ ಅಷ್ಟೇ ವೇಗದಲ್ಲಿ ಕೆಲವು ಅಧಿಕಾರಿಗಳ ಕಣ್ ತಪ್ಪಿಸಿ ಕಟ್ಟಡಗಳು ನಡೆಯುತ್ತಿವೆ.
ನಗರದಲ್ಲಿ
ವಸತಿ ಸಂರ್ಕೀಣ ಹಾಗೂ ವಾಣಿಜ್ಯ ಮಳಿಗೆಗಳನ್ನು ಯಾವುದೇ
ಪರವಾನಗಿ ಇಲ್ಲದೆ ಕಟ್ಟಲಾಗುತ್ತಿದ್ದರೂ ಸಹ ನಗರಸಭೆ ಅಧಿಕಾರಿಗಳು
ಮೌನಕ್ಕೆ ಜಾರಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ
ಎಡೆಮಾಡಿದೆ.
ಹೌದು ಇದು ಚಳ್ಳಕೆರೆ ನಗರಸಭೆ ವ್ಯಾಪ್ತಿಯ
ಚಿತ್ರದುರ್ಗ ಮುಖ್ಯ ರಸ್ತೆಗೆ ಹೊಂದಿಕೊಂಡ ಪ್ರವಾಸಿ ಮಂದಿರದ
ಎದುರು ರೆಡ್ಡಿ ಕಾಂಪ್ಲೆಕ್ಸ್ ಗೆ ಹೊಂದಿಕೊಂಡ ಖಾಲಿ ನಿವೇಶನದಲ್ಲಿ
ಸರ್ವೀಸ್ ರಸ್ತೆಯ ಡಾಂಬರ್ ರಸ್ತೆಗೆ ಹೊಂದುಕೊಂಡು ಕಟ್ಟಡ
ನಿರ್ಮಾಣ ಮಾಡುತ್ತಿದ್ದಾರೆ ಎಂದು ಸಾರ್ವನಿಕರು ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾಹಿತಿ ನೀಡಿದಾಗ ಸ್ಥಳದಲ್ಲಿದ್ದವರನ್ನು ವಿಚಾರಿಸಿದಾಗ
ಇದು ಬೇರೆಯವರ ಖಾಲಿ ನಿವೇಶನವನ್ನು ನಾವು ಬಾಡಿಗೆ ಪಡೆದು
ಪ್ಲೇವುಡ್ ಮಾರಾಟ ಶೆಡ್ ನಿರ್ಮಿಸುತ್ತಿದ್ದೇವೆ ಎಂದು ಉತ್ತರ
ನೀಡಿದರು.
ಕೂಡಲೆ ನಗರಸಭೆ ಕಟ್ಟಡ ಪರವಾನಿಗೆ ನೀಡುವ ಶಾಖೆಯ
ಚೇತನ್ ಸಂಪರ್ಕಿಸಿದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ
ನಗರಸಭೆ ವತಿಯಿಂದ ಯಾವುದೇ ಪರವಾನಿಗೆ ಪಡೆಯದೇ
ಇರುವುದು ಬೆಳಕಿಗೆ ಬಂದಿದೆ.
ಮುಖ್ಯರಸ್ತೆಯ ಜನದಟ್ಟಣೆ ಪ್ರದೇಶ
ಹಾಗೂ ಇಲ್ಲಿ ನಗರಸಭೆ ಅಧಿಕಾರಿ ಸಿಬ್ಬಂದಿಗಳೂ ಸಹ
ಓಡಾಡುತ್ತಿದ್ದರೂ ಸಹ ಕಟ್ಟಡ ಕಟ್ಟುತ್ತಿರುವ ಬಗ್ಗೆ ಕೇಳದೆ ಮೌನಕ್ಕೆ
ಶರಣಾಗಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ
ಹಣ ಇದ್ದವರು ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ
ಸಾಕಷ್ಟು ಇವೆ ಅದರಲ್ಲಿ ಉದಾಹರಣೆಗೆ ಬೆಂಗಳೂರು ರಸ್ತೆ ತಾಲೂಕು
ಪಂಚಾಯಿತಿ ನಿವೇಶನದಲ್ಲಿ ಖಾಸಗಿಯವರು ಕಟ್ಟಡ
ನಿರ್ಮಿಸಿಕೊಂಡರೆ ಸರಕಾರಿ ವಾಣಿಜ್ಯ ಮಳಿಗೆಯನ್ನು ಇಲಾಖೆ ಹಾಗೂ
ನಗರಸಭೆಯಿಂದ ಪರವಾನಿಗೆ ಪಡೆಯದೆ ಕಟ್ಟಡ ಕಿತ್ತು ವಿಸ್ತರಣೆ
ಮಾಡಿಕೊಂಡಿರುವುದು.
ಪಾವಗಡ ರಸ್ತೆಯಲ್ಲಿ ನಗರಸಭೆಗೆ ಸೇರಿದ
ಜಾಗದಲ್ಲಿ ಖಾಸಗಿಯವರು ವಾಣಿಜ್ಯ ಮಳಿಗೆ ಕಟ್ಟಿಕೊಂಡಿರುವುದು
ಇನ್ನು ಹತ್ತು ಹಲವು ಸರಕಾರಿ ಜಾಗ ಪ್ರಭಾವಿಗಳ ಪಾಲಾಗಿದೆ ಎಂದು
ನಗರದ ಬುದ್ದಿವಂತರು ಹಾಗೂ ಸಾರ್ವಜನಿಕರಲ್ಲಿ ಗುಸು ಗುಸು
ನಗರಸಭೆ ಪರವಾನಿಗೆ ಪಡೆಯದೇ
ಮಾತುಗಳು ಕೇಳಿ ಬರುತ್ತಿವೆ.
ಕಾನೂನು ಉಲ್ಲಂಘಿಸಲಾಗಿದ್ದರೂ ಇದರ ವಿರುದ್ಧ ಕ್ರಮ ಕೈಗೊಳ್ಳದೇ
ಕೈಕಟ್ಟಿ ಕುಳಿತುಕೊಂಡಿದ್ದಾರೆ. ಎಂಬ ಆರೋಪಗಳು ಕೇಳಿ ಬರುತ್ತಿವೆ
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವರೇ
ಕಾದು ನೋಡ ಬೇಕಿದೆ.