ಚಳ್ಳಕೆರೆ. ಜು4: ಸ್ವಾಮಿ ವಿವೇಕಾನಂದರ ಮತ್ತು ಪಿಂಗಳೆ ವೆಂಕಯ್ಯನವರ ಪುಣ್ಯ ಸ್ಮರಣೆಯ ಅಂಗವಾಗಿ ಇಂದು ಭಾರತ ಸೇವಾದಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ಚಳ್ಳಕೆರೆ ತಾಲೂಕು ಮಟ್ಟದ ಶಿಕ್ಷಕರ ಪುನಶ್ಚೇತನ ಶಿಬಿರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಸುರೇಶ್ ರವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಕಾರ್ಯಗಾರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮತ್ತು ಪಿಂಗಳೆ ವೆಂಕಯ್ಯನವರ ದೇಶಭಕ್ತಿಯನ್ನು ಪ್ರತಿಯೊಬ್ಬರು ಮನಸ್ಸಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಭಾರತ ಸೇವಾದಳವು ಇಂತಹ ನೈತಿಕ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿದ್ದು ಇದರಿಂದ ಮಕ್ಕಳಲ್ಲಿ ದೇಶಭಕ್ತಿ, ಭಾವೈಕ್ಯತೆ, ಶಿಸ್ತು ಮೂಡುತಿದೆ ಎಂದರು. ಸೇವಾದಳದ ತರಬೇತಿ ಪಡೆದ ಶಿಕ್ಷಕರು ಈ ಮೌಲ್ಯಗಳನ್ನು ಮಕ್ಕಳಿಗೆ ನೀಡಬೇಕೆಂದು ತಿಳಿಸಿದರು.
ವಲಯ ಸಂಘಟಕರಾದ ಎಂ ಅಣ್ಣಯ್ಯನವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕರು ಶಾಲೆಗಳಲ್ಲಿ ಸೇವಾದಳ ಪಠ್ಯಕ್ರಮದಂತೆ ಜೂನ್ ಮಾಹೆಯಿಂದ ಮಾರ್ಚ್ ಮಾಹೆಯವರೆಗೆ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕೆಂದು ತಿಳಿಸಿದರು. ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಕಾರ್ಯಗಾರದ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಸದಸ್ಯ ಆದರ್ಶ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ಧಲಿಂಗಪ್ಪ, ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕೆ ಟಿ ವೇಲೂರು, ಸಂಘದ ಉಪಾಧ್ಯಕ್ಷ ಪಾಲಯ್ಯ ಮತ್ತು ತಾಲೂಕು ಭಾರತ ಸೇವಾದಳ ಉಪಾಧ್ಯಕ್ಷ ಪಾಲಯ್ಯ ಉಪಸ್ಥಿತರಿದ್ದರು. ಈಶ್ವರಪ್ಪ ಸ್ವಾಗತಿಸಿದರು ಆಧಿನಾಯಕ ಪ್ರಾಣೇಶ್ ನಿರೂಪಿಸಿದರು. ತಾಲ್ಲೂಕು ಸಮಿತಿಯ ಸದಸ್ಯೆ ರೂಪವತಿ ವಂದಿಸಿದರು. ಕಾರ್ಯಕ್ರಮದಲ್ಲಿ ಸೇವಾದಳದ ತರಬೇತಿ ಪಡೆದ ಶಿಕ್ಷಕರು ಭಾಗವಹಿಸಿದ್ದರು..

Namma Challakere Local News
error: Content is protected !!