ತೊರೆಕೋಲಮ್ಮನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಅಬ್ಬೇನಹಳ್ಳಿ ಕ್ಲಸ್ಟರ್ ಸಿಆರ್ಪಿ ಜಿ. ಪಾಲಯ್ಯ
ಜೋಡಿತ್ತಿನ ಗಾಡಿ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆಂಗ್ಲ ಶಾಲೆಗೆ ದಾಖಲಾಗುವಂತೆ ವಿದ್ಯಾರ್ಥಿಗಳಿಂದ ಜಾಗೃತಿ.
ನಾಯಕನಹಟ್ಟಿ:: ಸರ್ಕಾರಿ ಶಾಲೆಗಳ ಉಳಿವಿಗೆ ಪೋಷಕರು ಸಹಕರಿಸಿ ಎಂದು ಅಬ್ಬೇನಹಳ್ಳಿ ಕ್ಲಸ್ಟರ್ ಸಿ ಆರ್ ಪಿ ಜಿ ಪಾಲಯ್ಯ ಹೇಳಿದ್ದಾರೆ.
ಶುಕ್ರವಾರ ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊರೆಕೋಲಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಆಯೋಜಿಸಿದ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭೋತ್ಸವದಲ್ಲಿ ಆಂಗ್ಲಶಾಲೆಯ ಕೊಠಡಿಯ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು
ಆಂಗ್ಲ ಭಾಷೆ ರಾಷ್ಟ್ರಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದು ಗ್ರಾಮೀಣ ಪ್ರದೇಶದ ಮಕ್ಕಳು ಆಂಗ್ಲ ಭಾಷೆ ಕಲಿತರೆ ಮುಂದೆ ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ. ಆದ್ದರಿಂದ ಗ್ರಾಮದ ಪೋಷಕರು ಸರ್ಕಾರಿ ಶಾಲೆಗಳ ಉಳಿವಿಗೆ ಸಹಕರಿಸಿ ಎಂದರು
ಅಬ್ಬೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಾಪಮ್ಮ ಆನಂದಪ್ಪ ಮಾತನಾಡಿ. ಮಕ್ಕಳ ಶಿಕ್ಷಣಕ್ಕೆ ಪೋಷಕರ ಪಾತ್ರ ಅತಿ ಮುಖ್ಯವಾಗಿದ್ದು ಶಿಕ್ಷಕರ ಜೊತೆಯಲ್ಲಿ ಪೋಷಕರು ಮಕ್ಕಳ ಕಲಿಕೆಯ ಬಗ್ಗೆ ಶಾಲೆಗೆ ಬಂದು ವಿಚಾರಿಸಿ ಬೇಕು ಪ್ರತಿಯೊಬ್ಬಕ್ಕೂ ಶಿಕ್ಷಕರನ್ನು ದೂರುವುದು ಸರಿಯಲ್ಲ ಪೋಷಕರು ಶಿಕ್ಷಕರಿಗೆ ಸಹಕಾರ ನೀಡಿದಲ್ಲಿ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅನಿತಮ್ಮ ಜಿ ಎಂ ಜಯಣ್ಣ ಮಾತನಾಡಿ
ಆಂಗ್ಲ ಮಾಧ್ಯಮ ಶಾಲೆ ಗ್ರಾಮದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಅಂತದಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ಕೊಡಿಸುವ ಕೆಲಸವಾಗಬೇಕು ಎಂದರು.
ಸದಸ್ಯ ಕೆ ಜಿ ತಿಪ್ಪೇಸ್ವಾಮಿ ಮಾತನಾಡಿ ಮಾತೃಭಾಷೆ ಕನ್ನಡ ವಾದರೂ ಸಹ ವ್ಯವಹಾರ ಮತ್ತು ಉನ್ನತ ಶಿಕ್ಷಣ ಪಡೆಯಲು ಆಂಗ್ಲ ಆಂಗ್ಲ ಭಾಷೆ ಅತಿ ಮುಖ್ಯವಾದದ್ದು ಕಾಲಮಾನಕ್ಕೆ ತಕ್ಕಂತೆ ಇಂಗ್ಲಿಷ್ ಭಾಷೆಯ ಉನ್ನತ ಶಿಕ್ಷಣ ಪಡೆಯಲು ಈಗಿನ ವಿದ್ಯಾರ್ಥಿಗಳಿಗೆ ಸಹಕಾರಿ ಅಗಲಿದೆ ಎಂದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಗಾದ್ರಪ್ಪ, ಊರಿನ ಮುಖಂಡರಾದ ಪಾಲಯ್ಯ, ನಿವೃತ್ತ ಶಿಕ್ಷಕ ಪಿತಮ್ಂಬರ್, ಶಾಂತವೀರಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ರುದ್ರಪ್ಪ. ಉಪಾಧ್ಯಕ್ಷ ಶಾರದಮ್ಮ, ಸದಸ್ಯ ಮಂಜುನಾಥ್, ಓ ತಿಪ್ಪೇಸ್ವಾಮಿ, ಗುರುಸ್ವಾಮಿ, ಸಿಆರ್ ಪಿ
ಆರ್. ಈಶ್ವರಪ್ಪ,
ಮುಖ್ಯ ಶಿಕ್ಷಕ ಎಂ. ಮಲ್ಲಿಕಾರ್ಜುನ್,
ಸಹಶಿಕ್ಷಕರಾದ ಕೆ ಜಿ ಬಸವರಾಜ್, ಆರ್ ಪ್ರಕಾಶ್, ಎನ್ ನಿಂಗರಾಜ್, ಪಿ. ಶರಣಪ್ಪ,
ಬಿ ಡಿ. ಕಿರಣ್ ಕುಮಾರ್, ಜಿ ಪಿ ನಟರಾಜ್, ನಿರಂಜನ್ ಗೌಡ, ಜಿ. ಮಂಜುನಾಥ್, ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು