ಚಳ್ಳಕೆರೆ ನ್ಯೂಸ್ :
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮಾರಕ ನೀತಿಗಳು ಹಾಗೂ ರೈತ ಪರವಾದ ನೀತಿ ಜಾರಿಗೆ ತರಲು ಎಚ್ಚರಿಕೆಯ ಮನವಿ ಪತ್ರವನ್ನು ನೀಡುವ ಮೂಲಕ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಚಳ್ಳಕೆರಮ್ಮ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ನೆಹರು ವೃತ್ತದಲ್ಲಿ ಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಿ ನಂತರ ತಾಲೂಕು ಕಛೇರಿಗೆ ದಾವಿಸಿ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ ರೈತ ಭಾಂಧವರು ತಮಟೆ ಹೊಡೆಯುವ ಮೂಲಕ ಕಾಲ್ನಡಿಗೆಯಲ್ಲಿ ಆಗಮಿಸಿದ ಅವರು ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಮಾತನಾಡಿ, ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಕಾಮಗಾರಿಗೆ ಕಳೆದ ಬಟ್ಟೆಟ್‌ನಲ್ಲಿ ಘೋಷಣೆ ಮಾಡಿದ
5300 ಕೋಟಿ ರೂ. ಗಳನ್ನು ತಕ್ಷಣ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಬೇಕು ಮತ್ತು
ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಬೇಕು ಹಾಗೂ ರಾಜ್ಯ ಸರ್ಕಾರ 25 ವರ್ಷಗಳಲ್ಲಿ
ನೆನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ಚುರುಕುಗೊಳಿಸಿ ಈ
ವರ್ಷದೊಳಗೆ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಅಭಿವೃದ್ಧಿ
ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ ಮಾತನಾಡಿ,
ರೈತರು ಕಳೆದ 30 ವರ್ಷ ಗಳಿಂದ ಭದ್ರಾ ಮೇಲ್ದಂಡೆ ಯೋಜನೆಯ ನೀರಿಗಾಗಿ ಜಾತಕ ಪಕ್ಷಿಗಳಂತೆ ಕಾದು
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬರದ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ
ಹೋರಾಟ ನಡೆಸಿದ್ದಾರೆ. ಅಧಿಕಾರಕ್ಕೆ ಬರುವ ಪ್ರತಿಯೊಂದು ಸರ್ಕಾರವು ಬರವಸೆ ನೀಡುತ್ತದೆಯೇ
ಹೊರತು ಇಂದಿಗೂ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರು ಕೊಡುವ ಕೆಲಸ ಮಾಡಿರುವುದಿಲ್ಲ.
ಈ ಯೋಜನೆಯನ್ನು ರಾಜಕಾರಣಿಗಳು ಓಟು ಬ್ಯಾಂಕಿಗೆ ಬಳಸಿಕೊಂಡು ರೈತರಿಗೆ ಮೋಸ ಮಾಡುತ್ತಾ
ಬಂದಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ 5300 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಬೇಕು.
ನಿರುದ್ಯೋಗಿಗಳಿಗೆ ಕಾಮಗಾರಿಯನ್ನು ಕೈಗೆತ್ತಿಕೊಂಡು ರೈತರ ಕೈಗೆ ಕೆಲಸಗಳನ್ನು ಕೊಡಬೇಕು. ಬೆಳೆನ
ರಾಜ್ಯ ಸರ್ಕಾರವು ಬರಗಾಲವನ್ನು ಅನುಭವಿಸುತ್ತಿರುವ ರೈತರಿಗೆ, ಕಾರ್ಮಿಕರಿಗೆ ಮತ್ತು
ಬೆಳೆ ಪರಿಹಾರ ಸಮರ್ಪಕವಾಗಿ ಎಲ್ಲಾ ರೈತರ ಖಾತೆಗಳಿಗೆ ಹಣ ಜಮಾ ಆಗಬೇಕು ಎಂದು ಒತ್ತಾಯಿಸಿದರು.
ಇನ್ನೂ ರೈತರು
ಸಾಗುವಳಿ ಮಾಡಿರುವ
ಬಗರ್‌ಹುಕುಂ
ಹಕ್ಕೊತ್ತಾಯಗಳನ್ನು ಎರಡೂ ಸರ್ಕಾರಗಳು ಕಾಲಮಿತಿಯಲ್ಲಿ ಮಾಡಿ ಮುಗಿಸಬೇಕು. ಸರ್ಕಾರಗಳು
ಎಲ್ಲಾ ರೈತರಿಗೆ ಹಕ್ಕುಪತ್ರಗಳನ್ನು ತಕ್ಷಣ ಕೊಡಬೇಕು. ಈ ಕೆಳಕಂಡ ರೈತರ
ನಿರ್ಲಕ್ಷ್ಯದಿಂದ ಈ ಬೇಡಿಕೆಗಳನ್ನು ಏನಾದರೂ ಈಡೇರಿಸದಿದ್ದ ಪಕ್ಷದಲ್ಲಿ ಇದಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ
ಬೀಗ ಜಡಿದು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಉಗ್ರವಾದ ಹೋರಾಟವನ್ನು ಮಾಡಲು
ರೈತ ಸಂಘಗಳು ತೀರ್ಮಾನಿಸಿವೆ ಮತ್ತು ಎರಡೂ ಸರ್ಕಾರಗಳಿಗೆ ಎಚ್ಚರಿಕೆಯನ್ನು ಕೊಡುತ್ತದೆ. ಈ
ಉಗ್ರವಾದ ಹೋರಾಟದಲ್ಲಿ ಎನಾದರೂ ಐಹಿತಕರ ಘಟನೆಗಳು ನಡೆದರೆ ಎರಡೂ ಸರ್ಕಾರಗಳು
ಹೊಣೆಗಾರರಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಒತ್ತಾಯಿಸಿದರು.
ರೈತರ ಹಕ್ಕೊತ್ತಾಯಗಳು
1) ಕೇಂದ್ರ ಸರ್ಕಾರವು ಕಳೆದ ಬಡ್ಡೆಟ್‌ನಲ್ಲಿ ಘೋಷಣೆ ಮಾಡಿದ 5300 ಕೋಟಿ ಹಣವನ್ನು
ತಕ್ಷಣ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿ ಇದನ್ನ “ ರಾಷ್ಟ್ರೀಯ ಯೋಜನೆ ”
ಎಂದು ಘೋಷಣೆ ಮಾಡಬೇಕು.
“
2) ರಾಜ್ಯ ಸರ್ಕಾರವು ನೆನೆಗುದಿಗೆ ಬಿದ್ದಿರುವ ಭದ್ರಾ ಕಾಮಗಾರಿಯನ್ನು ತಕ್ಷಣ ಚುರುಕುಗೊಳಿಸಿ
ಈ ವರ್ಷದೊಳಗಾಗಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು.
3) ರಾಜ್ಯ ಸರ್ಕಾರವು ಕೊಟ್ಟ ಮಾತಿನಂತೆ ರೈತರಿಗೆ ಮಾರಕವಾಗಿರುವ 3 ಕೃಷಿ ಕಾಯಿದೆಗಳನ್ನು
ತಕ್ಷಣ ಹಿಂಪಡೆಯಬೇಕು.
4) ರಾಜ್ಯ ಸರ್ಕಾರ ಹೊಸ ವಿದ್ಯುತ್ ಕಾಯಿದೆಯನ್ನು ಮುಂಜೂರು ಮಾಡಲು ಹೊರಟಿರುವುದು
ಖಂಡನೀಯ. ಈ ಕಾಯಿದೆಯನ್ನು ತಕ್ಷಣ ರದ್ದು ಮಾಡಿ ಈಗ ಹಾಲಿ ಇರುವ ಕಾನೂನನ್ನು
ಮುಂದುವರೆಸಬೇಕು.
5) ಸ್ವಾಮಿನಾಥನ್ ವರದಿಯನ್ನು ಆದರಿಸಿ ಬೆಲೆ ನೀತಿ ಮಾಡಿದರೆ ಮಾತ್ರ ರೈತರ ಬದುಕು
ಹಸನಾಗಲು ಸಾಧ್ಯ ಮತ್ತು ರೈತ ಆತ್ಮಹತ್ಯೆಗಳಿಗೂ ಕೂಡ ಪರಿಹಾರ ಆದ್ದರಿಂದ ಈ ವರದಿಯನ್ನು
ತಕ್ಷಣ ಜಾರಿಗೊಳಿಸಬೇಕು ಮತ್ತು ಸ್ವಾಮಿನಾಥನ್ ವರದಿ ಜಾರಿಯಾಗುವವರೆಗೂ ರೈತರ
ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು.
6) ಸುಮಾರು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡಿರುವ ರೈತರಿಗೆ ಹಕ್ಕು
ಪತ್ರಗಳನ್ನು ಕೊಡಬೇಕು.
7) ಚಿಕ್ಕಬಳ್ಳಾಪುರ ಜಿಲ್ಲೆ ಶೀಡ್ಲಘಟ್ಟ ತಾಲ್ಲೂಕಿನಲ್ಲಿ ಈಗಾಗಲೆ ಸಾಗುವಳಿ ಮಾಡಿರುವ
ಭೂಮಿಯಲ್ಲಿ ನೀರಾವರಿಗಳನ್ನು ಮಾಡಿ ಜೀವನ ಸಾಗಿಸುತ್ತಿರುವ ರೈತರ ಜಮೀನುಗಳಿಗೆ
ಬೇಲಿ ಹಾಕಿ ರೈತರನ್ನು ವಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆಯ ದುರಾಡಳಿತವನ್ನು ಸರ್ಕಾರವು
ತಕ್ಷಣ ತಡೆಗಟ್ಟಬೇಕು.
8) ಬರಗಾಲ ಎದುರಿಸುತ್ತಿರುವ ರೈತರಿಗೆ ಬೆಳೆ ವಿಮೆ, ಬೆಳ ನಷ್ಟ ಪರಿಹಾರ ಸಮರ್ಪಕವಾಗಿ
ಬಂದಿರುವುದಿಲ್ಲ. ಆದ್ದರಿಂದ ಬಾರದೇ ಇರುವ ರೈತರಿಗೆ ರೈತರ ಖಾತೆಗಳಿಗೆ ತಕ್ಷಣ ಹಣ
ಬಿಡುಗಡೆ ಮಾಡಬೇಕು.
9) ಎತ್ತಿನಹೊಳೆ ಯೋಜನೆಯನ್ನು ತಕ್ಷಣ ಜಾರಿಗೊಳಿಸಬೇಕು ಮತ್ತು ಕೃಷಿಗೆ ನೀರು ಒದಗಿಸಬೇಕು.
ಇದೇ ಸಂಧರ್ಭದಲ್ಲಿ ಕೆಆರ್ ಎಸ್ ಸಂಘಟನೆಯ ಪದಾಧಿಕಾರಿಗಳು, ಪ್ರತಿಭಟನೆಗೆ ಸಾಥ್ ನೀಡಿದರು.
ಪ್ರತಿಭಟನೆಯಲ್ಲಿ ರೈತರಾದ ರಾಜಣ್ಣ ಚಂದ್ರಣ್ಣ ತಿಪ್ಪೇಸ್ವಾಮಿ ಚನ್ನಕೇಶವ ನಾಗರಾಜ್ ಬೊಮ್ಮಯ್ಯ ಸಿದ್ದಪ್ಪ ಶಿವಮ್ಮ ಚಿತ್ತಮ್ಮ ಓಬಯ್ಯ ಪಾಪಣ್ಣ ಹಾಗೂ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರಾದ ಮಹೇಶ್ ನಗರಮನ್ಗೆರೆ ಮುರುಳಿ ರಾಜಣ್ಣ ಇತರರು ಪಾಲ್ಗೊಂಡಿದ್ದರು