ಚಳ್ಳಕೆರೆ ನ್ಯೂಸ್ :
ಅಕ್ರಮ ಸಂಬಂಧದಿಂದ
ಪತ್ನಿಯೊಬ್ಬಳು ಊಟದಲ್ಲಿ ವಿಷ ಹಾಕಿ ಗಂಡನನ್ನು ಕೊಲ್ಲಲು
ಯತ್ನಿಸಿರುವ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡರಿ ಗ್ರಾಪಂ ವ್ಯಾಪ್ತಿಯ
ಬೊಮ್ಮಸಮುದ್ರ ಗ್ರಾಮದ ಲಕ್ಷ್ಮಣನ ಪತ್ನಿ ಸಂಗೀತ ಹಾಗೂ ಅದೇ
ಗ್ರಾಮದ ಈರಣ್ಣ ಇಬ್ಬರ ನಡುವೆ ಅಕ್ರಮ ಸಂಪರ್ಕ ಇರುವ ಬಗ್ಗೆ
ಗ್ರಾಮದ ಕೆಲವರಿಗೆ ತಿಳಿದಿದ್ದು
ಈ ವಿಚಾರ ತನ್ನ
ಗಂಡನಿಗೆ ತಿಳಿದಿರಬಹುದೆಂದು ಪತ್ನಿ ಸಂಗೀತ ಹಾಗು ಈರಣ ಇಬ್ಬರೂ
ಸೇರಿಕೊಂಡು ಅವರ ಸಂಬಂದವನ್ನು ಮುಚ್ಚಿಡುವ ಸಲುವಾಗಿ ಸಂಚು
ರೂಪಿಸಿ ಗಂಡನಿಗೆ ಮುದ್ದೆಯಲ್ಲಿ ಕಳೆ ನಾಷಕ ಔಷಧಿಯನ್ನು ಮಿಶ್ರಣ
ಮಾಡಿ ಕೊಲ್ಲಲು ಸಂಚು ರೂಪಿಸಿದ್ದು ಗಂಡ ಲಕ್ಷ್ಮಣ್ ಊಟ ಮಾಡುವ
ಮುನ್ನ ವಾಸನೆ ಬಂದಿದ್ದರಿಂದ ಊಟ ಮಾಡದೆ ಚಳ್ಳಕೆರೆ ಪೊಲೀಸ್
ಠಾಣೆಗೆ ಬಂದು ಜೀವಕ್ಕೆ ಹಾನಿ ಉಂಟು ಮಾಡುವ ಸಂಚು ರೂಪಿಸಿದ್ದ
ಹೆಂಡತಿ ಸಂಗೀತ ಹಾಗೂ ಈರಣ್ಣ ಇವರು ವಿರುದ್ಧ ಕಾನೂನು ಕ್ರಮ
ಜರುಗಿಸುವಂತೆ ದೂರು ನೀಡಿದ್ದಾರೆ.
ಪಿಎಸ್‌ಐ ಧರೆಪ್ಪ ಚಳ್ಳಕೆರೆ
ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.