ನಾಯಕನಹಟ್ಟಿ:: ಜೂನ್ 27 .
ಹೆತ್ತವರಿಗೆ ಗ್ರಾಮದ ಗುರು ಹಿರಿಯರನ್ನು ಗೌರವದಿಂದ ಕಂಡಾಗ ಮಾತ್ರ ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿ ಸಿಗಲು ಸಾಧ್ಯ. ಎಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ.

ಗುರುವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಚನ್ನಬಸಯ್ಯನಹಟ್ಟಿ ಗ್ರಾಮದ ಎ.ಕೆ. ಕಾಲೋನಿಯ ಶ್ರೀ ದುರ್ಗಾಂಬಿಕ ದೇವಿ ನೂತನ ದೇವಸ್ಥಾನಕ್ಕೆ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಗ್ರಾಮಗಳಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ದೇವಸ್ಥಾನಗಳು ಬೇಕು ಮೊಳಕಾಲ್ಮೂರು ಕ್ಷೇತ್ರದಲ್ಲಿ ನಾನು ಶಾಸಕನಾದ ಅವಧಿಯಲ್ಲಿ ಇಡೀ ಕ್ಷೇತ್ರದ ಅತ್ಯಂತ ಧಾರ್ಮಿಕ ಕಾರ್ಯಗಳಿಗೆ ದೇವಸ್ಥಾನಗಳಿಗೆ ಸಾಕಷ್ಟು ಅನುದಾನವನ್ನ ನೀಡಿ ಅಭಿವೃದ್ಧಿಪಡಿಸಿದ್ದೇನೆ. ಇತಿಹಾಸದಲ್ಲಿ ನಾಯಕನಹಟ್ಟಿ ವಡ್ಡನಹಳ್ಳಿ ಮಾರಮ್ಮ ಜಾತ್ರೆಯನ್ನು ಅದ್ದೂರಿಯಾಗಿ ಇಡೀ ಹೋಬಳಿಯ ಜನತೆ ಮಾಡಿದ್ದೇನೆ ಚನ್ನಬಸಯ್ಯನಹಟ್ಟಿ ಗ್ರಾಮದಲ್ಲಿ ಶ್ರೀ ದುರ್ಗಾಂಬಿಕ ದೇವಿ ಶಾಂತಿ ಮತ್ತು ನೆಮ್ಮದಿಯನ್ನು ಗ್ರಾಮದ ಜನತೆಗೆ ನೀಡಲಿ ಎಂದು ಶುಭ ಹಾರೈಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಟಿ. ಮಹೇಶ್ವರಮ್ಮ. ಗುರು ಶಾಂತಮ್ಮ, ಊರಿನ ಮುಖಂಡ ಡಿ ಬಿ ಬೋಸಯ್ಯ, ಎಂ. ಶರಣಪ್ಪ, ಆರ್ ತಿಪ್ಪೇಸ್ವಾಮಿ,ಹಟ್ಟಿಯ ಯಜಮಾನ ಬಸವರಾಜಪ್ಪ, ಜಯಣ್ಣ ,ಮೋದೂರು ದುರುಗಪ್ಪ, ಮೋದೂರು ತಿಪ್ಪೇಸ್ವಾಮಿ, ರಾಜಣ್ಣ, ಸೇರಿದಂತೆ ಗ್ರಾಮದ ಯುವಕರು ಮಹಿಳೆಯರು ವೃದ್ಧರು ಇದ್ದರು

About The Author

Namma Challakere Local News
error: Content is protected !!