ನಾಯಕನಹಟ್ಟಿ:: ಪಟ್ಟಣದ ಶ್ರೀ ಗುರುತಿಪ್ಪೇರುದ್ರ ಸ್ವಾಮಿಯ ಒಳಮಠದ ಮುಂಭಾಗದ ರಾಜ್ಯ ಹೆದ್ದಾರಿ 45ರ ಚಳ್ಳಕೆರೆ ರಸ್ತೆಯ ಸುಮಾರು 50 ಲಕ್ಷದ ರಸ್ತೆ ಕಾಮಗಾರಿ ಕಳೆದ ಮಾರ್ಚ್ ತಿಂಗಳ 24ರಂದು ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಕೇವಲ ಮೂರೇ ತಿಂಗಳಿಗೆ ರಸ್ತೆ ಕಾಮಗಾರಿ ಕಳಪೆ ಕಾಮಗಾರಿಯಿಂದ ಕೂಡಿದ್ದು ರಸ್ತೆ ತೊಗ್ಗು ಗುಂಡಿಗಳು ಬಿದ್ದಿವೆ. ಲೋಕಪಯೋಗ ಇಲಾಖೆಯ ಯಾವುದೇ ಅಧಿಕಾರಿಗಳಾಗಲಿ ಗುತ್ತಿಗೆದಾರರಾಗಲಿ ಇತ್ತ ಕಡೆ ಗಮನ ಹರಿಸಿದ ಎಂದು ಪಟ್ಟಣದ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವವರು ಕಾದು ನೋಡಬೇಕಾಗಿದೆ