ಚಳ್ಳಕೆರೆ ನ್ಯೂಸ್ :

ದೇವರ ಎತ್ತುಗಳು ಭಗವಂತನ ಸ್ವರೂಪ” ಎಂಬುದು
ಈ ಭಾಗದ ನಂಬಿಕೆ

ಚಳ್ಳಕೆರೆ : ಬಳ್ಳಾರಿ ರಸ್ತೆಯ ಚಿಕ್ಕಮ್ಮನಹಳ್ಳಿ ಹತ್ತಿರದ ದೇವರಹಟ್ಟಿ ಗ್ರಾಮದಲ್ಲಿ ಚಳ್ಳಕೆರೆಯ ಶ್ರೀ ಶಾರದಾಶ್ರಮದ ವತಿಯಿಂದ ಆಯೋಜಿಸಿದ್ದ ದೇವರ ಎತ್ತುಗಳಿಗೆ ಬಾಳೆಹಣ್ಣು ಮತ್ತು ಮಕ್ಕಳಿಗೆ ಸಿಹಿ ವಿತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು-

ದೇವರ ಎತ್ತುಗಳನ್ನು ಸಾಕ್ಷಾತ್ ಭಗವಂತನ ಪ್ರತಿರೂಪವೆಂದು ಭಾವಿಸಿ ದೇವರಹಟ್ಟಿ ಗ್ರಾಮದ ಬುಡಕಟ್ಟು ಸಮುದಾಯ ಅವುಗಳ‌ ಪಾಲನೆ ಮತ್ತು ಪೋಷಣೆಯಲ್ಲಿ ತೊಡಗಿರುವುದು ತುಂಬಾ ಶ್ಲಾಘನೀಯ ಸೇವೆ ಎಂದರು.

ಮುಂದಿನ ದಿನಗಳಲ್ಲಿ ಶ್ರೀ ಶಾರದಾಶ್ರಮದ ಕಡೆಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಅದೇ ರೀತಿ ದೇವರಹಟ್ಟಿ ಗ್ರಾಮದ ಪುಟಾಣಿ ಮಕ್ಕಳಿಗೆ ಸಿಹಿ ವಿತರಿಸುತ್ತಿರುವುದು ಮನಸ್ಸಿಗೆ ಆನಂದವನ್ನು ಮತ್ತು ತೃಪ್ತಿಯನ್ನು ಕೊಟ್ಟಿದೆ ಎಂದು ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ನೆರೆದ ಭಕ್ತರಿಗೆ ಶ್ರೀ ಮಾತೆ ಶಾರದಾದೇವಿ ಅವರ ಜೀವನ ಮತ್ತು ಸಂದೇಶಗಳನ್ನು ಹಲವಾರು ಉದಾಹರಣೆಗಳ‌ ಮೂಲಕ ತಿಳಿಯಪಡಿಸಿದರು.

ಈ ಕಾರ್ಯಕ್ರಮದಲ್ಲಿ ನಗರಸಭಾ ನಾಮನಿರ್ದೇಶಿತ ಸದಸ್ಯರಾದ ನೇತಾಜಿ ಪ್ರಸನ್ನ, ಯತೀಶ್ ಎಂ.ಸಿದ್ದಾಪುರ, ಸುಮನ ಕೋಟೇಶ್ವರ, ಯಶೋಧಾ ಪ್ರಕಾಶ್,ರೂಪಗಿರೀಶ್,ಡಾ.ಭೂಮಿಕ,ಮಂಗಳ, ಪುಷ್ಪ ,ಸಂತೋಷ್, ಪ್ರೇಮಕುಮಾರ್, ವಿನೋದ್,ಎತ್ತಿನ ಕಾಟಯ್ಯ, ಬೋರಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.

About The Author

Namma Challakere Local News
error: Content is protected !!