ಊರು ಕಟ್ಟಿ, ಕಲ್ಯಾಣಿ ನಿರ್ಮಿಸಿದ ಏಕೈಕ ವ್ಯಕ್ತಿ : ಕೆಂಪೇಗೌಡ.

ಚಳ್ಳಕೆರೆ : ಬೆಂಗಳೂರಿಗೆ ಯಾವುದೇ ನದಿಯ ಆಸರೆಯಿಲ್ಲ ಹಾಗಾಗಿ ಮುಂದಿನ ಪೀಳಿಗೆಗೆ ನೀರಿನ ತೊಂದರೆಯಾಗಬಾರದೆAಬ ಸದುದ್ದೇಶ ಅದರ ಹಿಂದಿತ್ತು ಅದರ ಜೊತೆಗೆ ನಗರದಲ್ಲಿ ಗಿಡಮರಗಳನ್ನು ನೆಟ್ಟು ಪರಿಸರ ಪ್ರೇಮಿ ಎನಿಸಿಕೊಂಡಿದ್ದರೂ ಈಗಲೂ ಸಹ ನಾವು ಬೆಂಗಳೂರು ನಗರಕ್ಕೆ ಹೋದಾಗ ಬೃಹತ್ ಮರಗಳನ್ನು ಹಾಗೂ ಉದ್ಯಾಹನ ವನಗಳನ್ನು ಕಾಣಬಹುದು ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 515ನೇ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು. ಬೆಂಗಳೂರು ಕಟ್ಟುವ ನಿಟ್ಟಿನಲ್ಲಿ ಕೆಂಪೇಗೌಡರು ಅದೆಷ್ಟು ಮಹತ್ವಾಕಾಂಕ್ಷಿಯಾಗಿದ್ದರೆAದರೆ ಈ ಪ್ರದೇಶದ ಸಂಪನ್ಮೂಲಗಳನ್ನು ಅರಿತು ಮುಂದಿನ ಜನಾಂಗಕ್ಕೆ ಬೇಕಾಗದ ಅಗತ್ಯ ಮೂಲ ಸೌಕರ್ಯಗಳನ್ನು ಅವರು ಆಗಲೇ ನಿರ್ಮಿಸಿದ್ದರು ಎಂದರು.

ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ರೇಹಾನ್ ಪಾಷ ಮಾತನಾಡಿ, ಕೆಂಪೆಗೌಡರು ಬೆಂಗಳೂರು ನಗರ ಸಂಸ್ಥಾಪಕರು, ಅಂದು ಅವರು ಮಾಡಿದ ಕೆಲಸಗಳು ಇಂದು ಚಿರಸ್ಮರಣೀಯವಾಗಿದೆ ಎಲ್ಲಾ ಸರ್ವ ಧರ್ಮಗಳು ಸಮಾನತೆ ಕಾಪಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ, ನೂರಾರು ವರ್ಷಗಳ ದೂರದೃಷ್ಟಿ ಇಟ್ಟುಕೊಂಡ ಮಹಾನ್ ನಾಯಕ ಎಂದರೆ ಅದು ಕೆಂಪೇಗೌಡರು ಮಾತ್ರ, ಅವರ ಕುಟುಂಬಕ್ಕೆ ವಿಜಯ ನಗರ ಸಾಮಾಜ್ರದಿಂದ ಸಹಕಾರದಿಂದ ಜನಪರ ಸೇವೆಗಳನ್ನು ಮಾಡಿದ್ದಾರೆ ಎಂದು ಮೆಲುಕು ಹಾಕಿದರು.

ಉಪನ್ಯಾನಕ ರವೀಶ್ ಉಪನ್ಯಾಸ ನೀಡುತ್ತಾ, ಬೆಂಗಳೂರು ಎಂಬ ಹೆಸರಿನ ಜಗತ್ಪçಸಿದ್ದ ನಗರವಾಗಿ ಬೆಳೆಸಲು ಕಾರಣರಾದವರು ಈ ಪ್ರಾಂತ್ಯದ ಅರಸ ಕೆಂಪೇಗೌಡ ಅವರ ಸಂಸ್ಮರಣಾ ದಿವಸವಿದು ಹಾಗಾಗಿಯೇ ಜೂ 27 ರಂದು ಕೆಂಪೇಗೌಡ ಜಯಂತೋತ್ಸವವನ್ನು ಆಚರಿಸಲಾಗುತ್ತಿದೆ. 1537 ರಲ್ಲಿ ಬೆಂದಕಾಳೂರು ಎಂಬ ನಗರವನ್ನು ಕಟ್ಟುವ ಮೂಲಕ, ಬೆಂದಕಾಳೂರಿನ ನಿರ್ಮಾಣವಾಗುವ ಮೊದಲು ಕೆಂಪೇಗೌಡರು ವಿಜಯನಗರದ ಅರಸರಿಗೆ ಸಾಮಂತರಾಗಿದ್ದರು ಎಂದು ತಿಳಿಸಿದರು.

ಒಕ್ಕಲಿಗ ಸಮಾಜದ ಅಧ್ಯಕ್ಷ ಚೆನ್ನಕೇಶವ ಮಾತನಾಡಿ, ಊರು ಕಟ್ಟಿದ ಮೇಲೆ ಜನಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಕೃಷಿ ಚಟಿಕೆ ಕೊಳ್ಳಲು ನೀರು ಸಂಗ್ರಹಣೆ ಕೆರೆ, ಕಲ್ಯಾಣಿ, ಕೃಷಿ ಹೊಂಡಗಳನ್ನು ನಿರ್ಮಿಸಿ ಒಂದು ಕರೆ ತುಂಬಿದರೆ ಮೊತ್ತೊಂದು ಕೆರೆಗೆ ನೀರು ಹರಿದು ಹೋಗುವಂಥ ಸೌಕರ್ಯಗಳನ್ನು ಆಗಲೇ ಕಲ್ಪಿಸಿದ್ದರು. ಅವರ ಅಧಿಕಾರವಧಿಯಲ್ಲಿ ನಿರ್ಮಿದ ಹಲವು ಯೋಜನೆಗಳನ್ನು ಈಗಲೂ ಸಹ ಅವಳಡಿಸಿಕೊಳ್ಳಲಾಗುತ್ತಿದೆ ಎಂದರು.

ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಇಓ ಶಶಿಧರ್, ಬಿಇಓ ಕೆ.ಎಸ್.ಸುರೇಶ್, ಕೃಷಿ ಸಹಾಯಕ ಅಧಿಕಾರಿ ಆರ್.ಅಶೋಕ್, ಪಶು ಸಂಗೋಪನೆ ಇಲಾಖೆ ಅಧಿಕಾರಿ ಡಾ.ರೇವಣ್ಣ, ತೋಟಗಾರಿಕೆ ಸಹಾಯಕ ಅಧಿಕಾರಿ ಆರ್.ವಿರೂಪಾಕ್ಷಪ್ಪ, ಪೌರಾಯುಕ್ತ ಸಿ.ಚಂದ್ರಪ್ಪ, ಬಿಸಿಎಂ ಅಧಿಕಾರಿಗಳು,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಒಕ್ಕಲಿಕ ಸಂಘದ ಅಧ್ಯಕ್ಷ ಚೆನ್ನಕೇಶವ, ಹೆಗ್ಗೆರೆ ಆನಂದಪ್ಪ, ಮೋಹನ್, ನಗರಸಭೆ ಸದಸ್ಯ ರಾಘವೇಂದ್ರ, ಕೆ.ವೀರಭದ್ರಪ್ಪ, ಪ್ರಶಾಂತ್, ರಮೇಶ್‌ಗೌಡ, ಕವಿತಾ, ಸುಮಕ್ಕ, ನೇತಾಜಿ ಪ್ರಸನ್ನ ಕುಮಾರ್, ಸಿಟಿ.ಶ್ರೀನಿವಾಸ್, ಇತರರು ಸಾರ್ವಜನಿಕರು ಪಾಲ್ಗೊಂಡಿದ್ದರು.

Namma Challakere Local News
error: Content is protected !!