ಚಳ್ಳಕೆರೆ : ಮಕ್ಕಳಿಗೆ ಮೊದಲ ದೇಗುಲ ಶಾಲಾ ಕೊಠಡಿ ಇಂತಹ ದೇಗುಲದಲ್ಲಿ ಮುಗ್ದ ಮಕ್ಕಳು ಸಂಸ್ಕಾರ, ಸಂಸ್ಕೃತಿ ಈಗೇ ಉತ್ತಮ ನಡವಳಿಕೆ ಕಲಿಯುವುದು, ವಿಶಿಷ್ಠವಾದ ಈ ದೇಗುಲದಲ್ಲಿ ನಿರಂತವಾಗಿ ಅಕ್ಷರಭ್ಯಾಸ ನಡೆಯುತ್ತಿದೆ ಎಂದು ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಡಿ.ದಯಾನಂದ ಪ್ರಹ್ಲಾದ್ ಹೇಳಿದರು.
ಅವರು ನಗರದ ಹೊಂಗಿರಣ ಇಂಟರ್‌ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಕ್ಷರ ಅಭ್ಯಾಸ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಕ್ಷರ ಅಭ್ಯಾಸ ಎಂಬುದು ಶಾಲಾ ಹಂತದಿAದ ನಡೆಯಬೇಕು ಮಠ ಮಾನ್ಯಗಳಿಗೆ ಹೋಗುವುದು ಒಂದು ಪದ್ದತಿಯಾದರೆ ಶಾಲಾ ಹಂತದಲ್ಲಿ ನಿತ್ಯವೂ ಅಕ್ಷರ ಕಲಿಯುವ ದೇಗುಲದಲ್ಲಿ ನಿರಂತರ ಅಭ್ಯಾಸ ಶಾಶ್ವತವಾಗಿರುತ್ತದೆ ಎಂದರು.
ಇನ್ನೂ ಸಂಸ್ಥೆಯ ಡಿ.ಎನ್.ಶಿವಪ್ರಸಾದ್ ಮಾತನಾಡಿ, ಬಾಲ್ಯದಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ನಾವು ಕಲಿಸುತ್ತೆವೆ ಎಂಬುದು ಪ್ರಮುಖ ಪಾತ್ರ ವಹಿಸುತ್ತದೆ, ಆದ್ದರಿಂದ ಕೇವಲ ಅಕ್ಷರ ಎಂಬುದು ಅಕ್ಷರ ಅಲ್ಲ ಅದು ಬದಲಾಗಿ ಮನುಷ್ಯನ ಸರ್ವಾಂಗೀಣ ಸರ್ವತೋಮುಖ ಅಭಿವೃಧ್ದಿಗೆ ನಾಂದಿ ಹಾಡುತ್ತದೆ. ಆದ್ದರಿಂದ ಬಾಲ್ಯದಲ್ಲಿ ಮಗುವಿಗೆ ಅಕ್ಷರ ಅಭ್ಯಾಸ ಎಂಬ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಪ್ರತಿ ವರ್ಷವೂ ಆಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.
ಮುಖ್ಯ ಶಿಕ್ಷಕ ಪ್ರಸಾದ್ ಮಾತನಾಡಿ, ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದು ಸರ್ವ ಶ್ರೇಷ್ಠವಾದ ಮಾಸ ಇದಾಗಿದೆ, ಅಕ್ಷರ ಅಭ್ಯಾಸದಲ್ಲಿ ಮೊದಲಿಗೆ ಗಣೇಶನ ನಮನ, ಸರಸ್ಪತಿ ನಮನ, ಗುರು ನಮನ ಈಗೇ ಮೂರು ಹಂತದಲ್ಲಿ ಪೂಜೆ ನಂತರ ಓಂ ನಮಾಯ ಶಿವಾಯ ಬರೆಯುವ ಬಾಲ್ಯದ ಮಗು ಉತ್ತಮ ಕಲಿಕೆಯಲ್ಲಿ ತೊಡಗುವ ದೃಡ ವಿಶ್ವಾಸವಿದೆ ಎಂದರು.
ಈದೇ ಸಂಧರ್ಭದಲ್ಲಿ ಸ್ವಾಮೀಜಿಯಾದ ಶ್ರೀಕುಮಾರಸ್ವಾಮಿ, ಶಾಲಾ ಶಿಕ್ಷಕರಾದ ಶೈಲಜಾ, ಶೋಭಾ, ಮಹದೇವ್, ಪ್ರಿಯಾಂಕಾ, ಮಾಲೀನಿ, ಸಿದ್ದೇಶ್, ಇತರರು ಮಕ್ಕಳು ಪೋಷಕರು ಇತರರು ಇದ್ದರು.
ರಾಮುದೊಡ್ಮನೆ ಚಳ್ಳಕೆರೆ?: