ಚಳ್ಳಕೆರೆ ನ್ಯೂಸ್ :
ಹಸುಗಳ ವಿತರಣೆಯಲ್ಲಿ ಗೋಲ್ ಮಾಲ್ ಆಗಿದೆ ಚಕ್
ಮಾಡಿ
ಚಿತ್ರದುರ್ಗದ ಎರೇಹಳ್ಳಿ ಗ್ರಾಮದಲ್ಲಿ ಹಸು ವಿತರಣಾ
ಯೋಜನೆಯಲ್ಲಿ ಅಕ್ರಮ ನಡೆದಿದೆ ನೀವು ಏನು ಕ್ರಮ
ತೆಗೆದುಕೊಂಡಿದ್ದೀರಾ ಎಂದು ಕೃಷಿ ಅಧಿಕಾರಿಯನ್ನು ಶಾಸಕ
ಕೆ ಸಿ ವೀರೇಂದ್ರ ಪಪ್ಪಿ ಪ್ರಶ್ನಿಸಿದರು.
ಅವರು ಚಿತ್ರದುರ್ಗದ
ಜಿಪಂ ಸಭಾಂಗಣದಲ್ಲಿ ನೆಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ
ಮಾತಾಡಿದರು. ಕೊಟ್ಟವರಿಗೆ ಹಸುಗಳ ವಿತರಣೆ ಮಾಡಲಾಗಿದೆ.
ಕೊಟ್ಟಿರುವ ಹಸುಗಳು ಇವೆಯೇ ಇಲ್ಲವೇ ಎಂದು ಮೊದಲು ಚಕ್
ಮಾಡಿ ವರದಿ ಕೊಡಬೇಕೆಂದು ತಾಕೀತು ಮಾಡಿದರು.