ಚಳ್ಳಕೆರೆ ನ್ಯೂಸ್ :
ಹೊಸ ಮನೆ ಕಟ್ಟಡದ ಕಾಮಗಾರಿ ಪಕ್ಕದಲ್ಲಿ ಹಳೆಮನೆಯೊಂದು ನೆಲಕ್ಕೆ ಉರುಳಿ ಓರ್ವ ಸಾವನ್ನಪ್ಪಿರುವ ಘಟನೆ ಜರುಗಿದೆ.
ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದ ನಲವತ್ತೈದು ವರ್ಷದ ಮುರುಳಿ ಎಂಬುವರು ಸಾವನ್ನಪ್ಪಿ ಕೂಲಿ ಕಾರ್ಮಿಕರೊಬ್ವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಈ ಘಟನೆ ಬುಧವಾರ ರಾಮಜೋಗಿಹಳ್ಳಿ ಗ್ರಾಮದ ಮುರುಳಿ ಎಂಬುವವರು ಹೊಸ ಮನೆ ಕಾಮಗಾರಿ ಮಾಡುತ್ತಿರುವಾಗ ಪಕ್ಕದ ಹಳೆಮನೆಯೊಂದರ ಮೇಲೆ ನಡೆದುಕೊಂಡು ಓಗುವ ವೇಳೆ ಏಕಾ ಏಕಿ ಹಳೆ ಮನೆ ಮೇಲ್ಚಾವಣಿ ಕುಸಿದು ಬಿದ್ದಿದೆ,
ಇನ್ನೂ ಮುರುಳಿ ಹಾಗೂ ಕೂಲಿ ಕಾರ್ಮಿಕ ಮಣ್ಣಿನಡಿಯಲ್ಲಿ ಸಿಲುಕಿ ಮುರುಳಿ ಸ್ಥಳದಲ್ಲಿ ಸಾವನ್ನಪ್ಪಿದರೆ, ಕೂಲಿ ಕಾರ್ಮಿಕರು ಇಬ್ಬರು ಪ್ರಾಣಪಾಯದಿಂದ ಪಾರಾಗಿ ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪಿಎಸ್ಐ ಧರೆಪ್ಪ ಬಾಳಪ್ಪ ಹಾಗೂ ಸಿಬ್ಬಂದಿ ಪಿಡಿಓ ಬೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.