ಚಳ್ಳಕೆರೆ ನ್ಯೂಸ್ :
ಬಜ್ ಇಂಡಿಯಾ ಸಂಸ್ಥೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ
:
ಚಿತ್ರದುರ್ಗ ನಗರದ ಶಾರದಮ್ಮ ಕಲ್ಯಾಣ ಮಂಟಪದಲ್ಲಿ ಬಜ್ ಇಂಡಿಯಾ ಸಂಸ್ಥೆವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಯೋಜಿಸಲಾಗಿತ್ತು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಗೆಳತಿ ಸಮಾಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ ಶೀಲಾ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳ ಕುರಿತು ಮಾತನಾಡಿ ಮಹಿಳೆಯರಿಗೆ ಪ್ರತಿಯೊಂದರಲ್ಲೂ ಸಮಾನವಾಗಿ ಸಮಪಾಲು ದೊರೆಯಬೇಕು ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹಿಳೆಯರು ಮುಂದುವರೆಯಬೇಕು ಹಾಗೂ ಮಹಿಳೆಯರು ಸ್ವಾವಲಂಬಿಯಾಗಿ ಜೀವಿಸಬೇಕು ಬುದ್ಧಿವಂತಿಕೆಯಿಂದ ಜೀವಿಸಬೇಕು ಮಹಿಳೆಯು ಪ್ರೀತಿ ಸಂಯಮ ಕರುಣೆ ತ್ಯಾಗಮಹಿ ಹಾಗೂ ತಾಳ್ಮೆನ ರೂಢಿಗೆತವಾಗಿ ಮಾಡಿಕೊಂಡಿರಬೇಕು ಅದರ ಜೊತೆಗೆ ಮಹಿಳೆಯರ ವಿದ್ಯಾಭ್ಯಾಸ ಬಗ್ಗೆ ಹಾಗೂ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆಯ ಕಾರ್ಯಾಚರಣ ವ್ಯವಸ್ಥಾಪಕರಾದ ನಾಗಭೂಷಣ್ ಹಾಗೂ ಬಜ್ ಇಂಡಿಯಾ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು…