ಚಳ್ಳಕೆರೆ ನ್ಯೂಸ್ :
ರೈತ ಕೇಶವಪ್ಪನ ಕೊಲೆ ಪ್ರಕರಣವನ್ನು ಸಿಓಡಿಗೆ ವಹಿಸಿ
ಹೊಸದುರ್ಗದ ಕಡಿವಾಣ ಕಟ್ಟೆಯಲ್ಲಿ ಗೋಮಾಳ ಜಮೀನು
ಒತ್ತುವರಿ ಪ್ರಶ್ನಿಸಿದ್ದಕ್ಕೆ, ರೈತ ಕೇಶವಪ್ಪನನ್ನು ಕೊಲೆ ಮಾಡಿದ್ದು,
ಈ ಪ್ರಕರಣವನ್ನು ಸಿಒಡಿ ತನಿಖೆ ನೀಡಿ ನ್ಯಾಯ ಕೊಡಿಸುವಂತೆ
ಮೃತ ಸಹೋದರ ಚಂದ್ರು ಒತ್ತಾಯಿಸಿದ್ದಾರೆ.
ಚಿತ್ರದುರ್ಗದಲ್ಲಿ
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಆರೋಪಿ ಯಲ್ಲಪ್ಪ ಹಾಗೂ
ಇತರರು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಇದರಿಂದ
ಕೇಶವಪ್ಪ ಮೃತಪಟ್ಟಿದ್ದು, ಮತ್ತೆ ಕೇಶವಪ್ಪನ ಕುಟುಂಬ ಹಾಗೂ
ನಮಗೂ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.