ಚಳ್ಳಕೆರೆ ಸುದ್ದಿ :
ಕೋಡಿಹಳ್ಳಿಯಲ್ಲಿ 10 ನೇಯ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ನೇಯ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ದಿನಾಂಕ : 21/06/2024 ರಂದು ಬೆಳಿಗ್ಗೆ ಶಾಲಾ ಆವರಣದಲ್ಲಿ ಆಚರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರು ಆದ ಶ್ರೀಯುತ ಕೆ.ಏಚ್ ಜಗನ್ನಾಥ್ ರವರು ಮಾತನಾಡಿ ನಮ್ಮ ದೇಹಕ್ಕೆ ನೀರು,ಆಹಾರ,ಗಾಳಿ,ಏಷ್ಟು ಮುಖ್ಯವೋ ಯೋಗವು ಅಷ್ಟೇ ಪ್ರಮುಖವಾದದ್ದು ಅಲ್ಲದೆ ಸದೃಢ ದೇಹ ಮತ್ತು ಆರೋಗ್ಯ ಗಳಿಸಬೇಕೆಂದರೆ ಯೋಗಾಭ್ಯಾಸ ವು ಮಾನವನಿಗೆ ನಿತ್ಯ ಸಂಜೀವಿನಿ ಇದ್ದಂತೆ ಹಾಗಾಗಿ ಪ್ರತಿಯೊಬ್ಬರೂ ಬೆಳಗಿನ ಜಾವ ವ್ಯಯಾಮ, ಧ್ಯಾನ, ಯೋಗ ಇವುಗಳನ್ನು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಎಲ್.ರತ್ನಮ್ಮ, ಎಸ್.ಸುಶೀಲಮ್ಮ, ಜೆ.ಸುಪ್ರಿಯಾ , ಜಿ. ಟಿ ಬಸವರಾಜ್, ಹಾಜರಿದ್ದರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು,ಉಪಾಧ್ಯಕ್ಷರು,ಮತ್ತು ಸದಸ್ಯರು, ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು, ಸಮಸ್ತ ಕೋಡಿಹಳ್ಳಿಯ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳು ಭಾಗವಹಿಸಿದ್ದರು.