ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕಕ್ಕೆ ಚಾಲನೆ ನೀಡಿದ ಮುಖ್ಯ ಶಿಕ್ಷಕಿ ಚಾರುಮತಿ.

ಚಳ್ಳಕೆರೆ:: ಜೂನ್ 22. ನೀರನ್ನು ಪೋಲು ಮಾಡದೆ ಮಿತವಾಗಿ ಬಳಕೆ ಮಾಡಲು ಜನರಲ್ಲಿ ಪ್ರಜ್ಞೆ ಮೂಡಬೇಕಾಗಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕಿ ಚಾರುಮತಿ ಹೇಳಿದ್ದಾರೆ.

ಅವರು ಶನಿವಾರ ತಾಲೂಕಿನ ಗಾಂಧಿನಗರ ವಲಯದ ಡಿ.ಉಪ್ಪಾರಹಟ್ಟಿ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶ್ರೀನಂದಗೋಕುಲ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ ಕಾರ್ಯಕ್ರಮಕ್ಕೆ ತಮಟೆ ಹೊಡೆಯುವ ಮೂಲಕ ಚಾಲನೆ ನೀಡಿ ಉದ್ಘಾಟಿಸಿ ಮಾತನಾಡಿದ ಅವರು ಭೂಮಿಯಲ್ಲಿ ಅಂತರ್ಜಲ ಕ್ಷೀಣಿಸಿದಂತೆ ದಿನೇ ದಿನೇ ನೀರಿನ ಸಮಸ್ಯೆ ಉಂಟಾಗಿ ಪರಿಸರದಲ್ಲಿ ಅಸಮಾತೋಲನ ಉಂಟಾಗಲಿದೆ ಈ ದಿಸೆಯಲ್ಲಿ ನೀರಿನ ಸಮಸ್ಯೆಯನ್ನು ಮನಗೊಂಡು ನೀರನ್ನು ಫೋನು ಮಾಡದೆ ಮಿತವಾಗಿ ಬಳಕೆ ಮಾಡಲು ಜನರಲ್ಲಿ ಪ್ರಜ್ಞೆ ಮೂಡಿಸಲು ಬೀದಿ ನಾಟಕದ ಮೂಲಕ ಸಾಕ್ಷಿ ಕಲಾತಂಡ ನಾಯಕನಹಟ್ಟಿ ಇವರಿಂದ ಬೀದಿ ನಾಟಕದ ಮೂಲಕ ನೀರನ್ನು ಉಳಿಸಿ ಜ್ಞಾನ ವಿಕಾಸ ಉಟುಭ ಚಾನಲ್ ಶಿಕ್ಷಣ ಬಾಲ್ಯ ವಿವಾಹ csc ಕೇಂದ್ರದ ಸೇವ ಸೌಲಭ್ಯಗಳು ಧರ್ಮಸ್ಥಳ ಸಂಘದ ಕಾರ್ಯಕ್ರಮಗಳು ಮದ್ಯಪಾನದ ಬಗ್ಗೆ ಕೇಂದ್ರದ ಸದಸ್ಯರಿಗೆ ಮನ ಮುಟ್ಟುವ ಮೂಲಕ ಬೀದಿ ನಾಟಕದ ಮೂಲಕ ಮಾಹಿತಿ ನೀಡಲಾಗಿದೆ ಎಂದರು.

ಇನ್ನೂ ಸಾಕ್ಷಿ ಕಲಾತಂಡ ನಾಯಕನಹಟ್ಟಿ ಇವರಿಂದ ನೀರಿನ ಮಹತ್ವ ಬಾಲ್ಯ ವಿವಾಹ ಮಧ್ಯಪಾನದ ಬಗ್ಗೆ ಅನೇಕ ಗೀತೆಗಳು ಜಾಗೃತಿ ಮೂಡಿಸಲಾಯಿತು.

ಇದೇ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕಿ ಲಕ್ಷ್ಮಿ, ತಾಲೂಕಿನ ಆಡಿಟರ್ ಉಮೇಶ್ ಜ್ಞಾನವಿಕಾಸ ಕೇಂದ್ರದ ಸಮನ್ವಯಧಿಕಾರಿ ಭವಾನಿ ,,
ಸಾಕ್ಷಿ ಕಲಾತಂಡದ ಕಲಾವಿದರಾದ.
ಸೇವಪ್ರತಿನಿಧಿ ಲತಾ ಹಾಗೂ ಕೇಂದ್ರದ ಎಲ್ಲಾ ಸದಸ್ಯರು ಗ್ರಾಮಸ್ಥರು ಹಾಜರಿದ್ದರು

About The Author

Namma Challakere Local News
error: Content is protected !!